ಮನೆ ರಾಜ್ಯ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್: ಬಾಲಕಿ ಸಹಿತ ಆರೋಪಿ ಬಂಧನ

ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್: ಬಾಲಕಿ ಸಹಿತ ಆರೋಪಿ ಬಂಧನ

0

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದ್ದ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಪಣಂಬೂರು ಪೊಲೀಸರು ಬಾಲಕಿ ಸಹಿತ ಆರೋಪಿಯನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತನನ್ನು ಕಸ್ಬಾ ಬೆಂಗ್ರೆ ನಿವಾಸಿ ಮುಹಮ್ಮದ್‌ ಸರ್ಫರಾಝ್‌ ಯಾನೆ ಚಪ್ಪು (22) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಆಗಸ್ಟ್‌ 10ರಂದು ಅಪಹರಣ ಮಾಡಿರುವುದಾಗಿ ಬಾಲಕಿಯ ಪೋಷಕರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪಣಂಬೂರು ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸೋಮಶೇಖರ್ ಜೆ.ಪಿ. ಅವರ ನೇತೃತ್ವದ ಪೊಲೀಸ್‌ ತಂಡ ಕೆಲವೇ ಗಂಟೆಗಳ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಬಾಲಕಿ ಸಹಿತ ಆರೋಪಿ ಮುಹಮ್ಮದ್‌ ಸರ್ಫರಾಝ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ವಿರುದ್ಧ ಠಾಣಾ ಅ.ಕ್ರ ನಂಬ್ರ 03/20 ಕಲಂ 303 37 ಐಪಿಸಿ ಕಲಂ 4, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯ ವಿರುದ್ಧ ಪಣಂಬೂರು, ಕಂಕನಾಡಿ, ಮಂಗಳೂರು ಉತ್ತರ, ಹಾಗೂ ಉಡುಪಿ ಜಿಲ್ಲೆಯ ಬೈದೂರು ಪೊಲೀಸ್‌ ಠಾಣೆಗಳಲ್ಲಿ ವಿವಿಧ ಕಲಂಗಳಡಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.

ಈ ಪೈಕಿ ಕಂಕನಾಡಿ ನಗರ ಠಾಣಾ ಅ.ಕ್ರ ನಂಬ್ರ 63/2023 ಕಲಂ:457,360 ಐಪಿಸಿ ಮತ್ತು ಬೈಂದೂರು ಠಾಣಾ ಅ.ಕ್ರ ನಂಬ್ರ 06/2013 ಕಲಂ:457,368 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದಾನೆ.