ಮನೆ ಅಂತಾರಾಷ್ಟ್ರೀಯ ಇಂಟೆರ್‌’ನೆಟ್‌ನಲ್ಲಿ ಟ್ವಿಟರ್ ಅತ್ಯಂತ ಆಸಕ್ತಿದಾಯಕ ತಾಣ: ಎಲಾನ್ ಮಸ್ಕ್

ಇಂಟೆರ್‌’ನೆಟ್‌ನಲ್ಲಿ ಟ್ವಿಟರ್ ಅತ್ಯಂತ ಆಸಕ್ತಿದಾಯಕ ತಾಣ: ಎಲಾನ್ ಮಸ್ಕ್

0

ನ್ಯೂಯಾರ್ಕ್: ಮೈಕ್ರೋಬ್ಲಾಗಿಂಗ್ ತಾಣವು ಇಂಟೆರ್‌’ನೆಟ್‌ನ ಅತ್ಯಂತ ಆಸಕ್ತಿದಾಯಕ ತಾಣವಾಗಿದ್ದು, ಅದಕ್ಕಾಗಿಯೇ ನೀವೀಗ ನನ್ನ ಟ್ವೀಟ್ ಅನ್ನು ಒದುತ್ತಿದ್ದೀರಿ ಎಂದು ಹೊಸ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್ ವೆರಿಫೈಡ್ ಖಾತೆಗಳಿಗೆ (ಬ್ಲೂ ಟಿಕ್) ಮಾಸಿಕ ಶುಲ್ಕ ವಿಧಿಸುವ ಎಲಾನ್ ಮಸ್ಕ್ ಯೋಜನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್, 44 ಬಿಲಿಯನ್ ಡಾಲರ್‌’ಗೆ (ಸುಮಾರು 3.36 ಲಕ್ಷ ಕೋಟಿಗೆ) ಟ್ವಿಟರ್ ಕಂಪನಿಯ ಪೂರ್ತಿ ಷೇರು ತಮ್ಮದಾಗಿಸಿಕೊಂಡಿದ್ದರು.

ಟ್ವಿಟರ್‌ನಲ್ಲಿ ಬ್ಲೂ ಟಿಕ್ ಖಾತೆ ಹೊಂದಿರುವವರಿಗೆ ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಮಸ್ಕ್, ಬುಧವಾರ ಹೇಳಿದ್ದರು. ಇದು ದೀರ್ಘಕಾಲದ ವಿಶ್ವಾಸಾರ್ಹ ಬಳಕೆದಾರರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಏತ್ಮನ್ಮಧ್ಯೆ ವೆಚ್ಚವನ್ನು ಕಡಿತಗೊಳಿಸಲು ಟ್ವಿಟರ್‌’ನ 3,700ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕುವ ಸಾಧ್ಯತೆಯಿದೆ ಎಂದು ಅಮೆರಿಕದ ತಂತ್ರಜ್ಞಾನ ವೆಬ್‌’ಸೈಟ್ ‘ದಿ ವರ್ಜ್’ ವರದಿ ಮಾಡಿದೆ.

ಹಿಂದಿನ ಲೇಖನಸಂಚಾರಿ ಶಿಕ್ಷಣ ಯೋಜನೆ: ಸಮಗ್ರ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಿದ ಹೈಕೋರ್ಟ್
ಮುಂದಿನ ಲೇಖನಉಗ್ರಗಾಮಿ ಮೊಹಮ್ಮದ್ ಆರಿಫ್‌’ಗೆ ವಿಧಿಸಲಾದ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ