ಮನೆ ಅಪರಾಧ ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳ ಬಂಧನ

0

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಬ್ಯಾಂಕ್ ​ನಲ್ಲಿ ಹಣ ಡ್ರಾ ಮಾಡುವ ಗ್ರಾಹಕರನ್ನು ಹಿಂಬಾಲಿಸಿಕೊಂಡು ಬಂದು ಹಣ ದೋಚುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್​​ನ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ದೇವನಹಳ್ಳಿಯ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Join Our Whatsapp Group

ಆಂಧ್ರಪ್ರದೇಶದ ಕೆ. ಹರಿಕೃಷ್ಣ ಮತ್ತು ತಮಿಳುನಾಡಿನ ಕೆ. ಸುಧಾಕರ್ ಬಂಧಿತ ಆರೋಪಿಗಳು. ಬಂಧಿತರಿಬ್ಬರು ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಜ. 4ರಂದು ಗ್ರಾಹಕರೊಬ್ಬರ ಹಣ ದೋಚಿ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್​ನಿಂದ ಹಣ ಡ್ರಾ ಮಾಡಲು ಹೋಗಿದ್ದ ಮಹೇಶ್ ಬಾಬು ಎಂಬುವರನ್ನು ಹಿಂಬಾಲಿಸಿಕೊಂಡು ಹೋಗಿದ್ದ ಬಂಧಿತರು, ವಿಜಯಪುರದ ಬುಲ್ಲಹಳ್ಳಿ ರಸ್ತೆಯಲ್ಲಿ ದರೋಡೆ ಮಾಡಿ 1.5 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಓಜಿಕುಪ್ಪಂ ಗ್ಯಾಂಗ್​ನ ಹರಿಕೃಷ್ಣ ಮತ್ತು ಸುಧಾಕರ್​ನನ್ನು ಬಂಧಿಸಿ, 50 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.