ಮನೆ ಮನರಂಜನೆ ಬೆಂಗಳೂರಿನಲ್ಲಿ ಎರಡು ದಿನ ‘Sci560 ಫಿಲ್ಮ್ ಫೆಸ್ಟಿವಲ್’

ಬೆಂಗಳೂರಿನಲ್ಲಿ ಎರಡು ದಿನ ‘Sci560 ಫಿಲ್ಮ್ ಫೆಸ್ಟಿವಲ್’

0

ಸೈನ್ಸ್ ಗ್ಯಾಲರಿ ಬೆಂಗಳೂರು (ಎಸ್​ ಜಿಬಿ) ‘Sci560 ಫಿಲ್ಮ್ ಫೆಸ್ಟಿವಲ್’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಫೆಬ್ರವರಿ 1 ಹಾಗೂ 2ರಂದು ದೊಮ್ಮಲೂರಿನ ‘ಬೆಂಗಳೂರು ಇಂಟರ್​ನ್ಯಾಷನಲ್ ಸೆಂಟರ್​’ನಲ್ಲಿ ಈ ಉತ್ಸವ ನಡೆಯಲಿದೆ.

Join Our Whatsapp Group

ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಿನಿಮಾ ವೀಕ್ಷಣೆಗೆ ಅವಕಾಶ ಇದೆ. ನಾಲ್ಕು ಭಾಷೆಯ 20 ಸಿನಿಮಾಗಳು ಪ್ರದರ್ಶನ ಕಾಣಲಿದೆ.

‘Sci560 ಫಿಲ್ಮ್ ಫೆಸ್ಟಿವಲ್’ಗೆ ಯಾರು ಬೇಕಾದರೂ ಸಿನಿಮಾ ಸಲ್ಲಿಕೆ ಮಾಡಬಹುದಿತ್ತು. ಈ ರೀತಿ ಸಲ್ಲಿಕೆ ಆದ ಚಿತ್ರಗಳನ್ನು ಬೆಂಗಳೂರು ಫಿಲ್ಮ್​ ಫೋರಂ ಸದಸ್ಯರು ಹಾಗೂ ಎಸ್​ಜಿಬಿ ತಂಡ ಆಯ್ಕೆ ಮಾಡಿದೆ. ಈ ರೀತಿ ಆಯ್ಕೆ ಆದ 20 ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರಸಾರ ಕಾಣಲಿವೆ. ಈ ಚಿತ್ರಗಳು ಬೆಂಗಳೂರಿನ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸಲಿದೆ.

ನಿತ್ಯ ಮಿಶ್ರಾ ಅವರು ನಿರ್ದೇಶನ ಮಾಡಿದ ‘ಡೌನ್​ ದಿ ಡ್ರೇನ್’ ಚಿತ್ರದ ಮೂಲಕ ಸಿನಿಮೋತ್ಸವ ಆರಂಭ ಆಗಲಿದೆ. ಸದ್ಯ ಬೆಂಗಳೂರು ಎದುರಿಸುತ್ತಿರುವ ನೀರಿನ ಕೊರತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ. ಮೊದಲ ದಿನ ಈ ರೀತಿಯ ಹಲವು ಸಿನಿಮಾಗಳು ಪ್ರದರ್ಶನ ಕಾಣಲಿವೆ.

ಎರಡನೇ ದಿನ ಮುಖ್ಯವಾಗಿ ಬಸವ ಬೀರಾದಾರ್ ಅವರು ಮಾಡಿದ ‘ಇನ್ ಸರ್ಚ್ ಆಫ್ ಗೋಲ್ಡ್’ ಡಾಕ್ಯುಮೆಂಟರಿ ಪ್ರದರ್ಶನ ಕಾಣಲಿದೆ. ಕೋಲಾರದ ಚಿನ್ನದ ಗಣಿಯ ಇತಿಹಾಸವನ್ನು ಇದು ತೆರೆದಿಡಲಿದೆ.  ಈ ರೀತಿಯ ಹಲವು ಸಿನಿಮಾಗಳು, ಡಾಕ್ಯುಮೆಂಟರಿಗಳು ಪ್ರಸಾರ ಕಾಣಲಿವೆ. ಸಿನಿಮಾ ನಿರ್ದೇಶಕರ ಜೊತೆ ಸಂವಾದ ಕೂಡ ಇರಲಿದ್ದು, ಇದರಲ್ಲಿ ಭಾಗವಹಿಸಿ ಜ್ಞಾನಾಭಿವೃದ್ಧಿ ಮಾಡಿಕೊಳ್ಳಬಹುದು. ಸಿನಿಮಾ ನೋಡಿದ ಬಳಿಕ ಮೂಡುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಉಚಿತವಾಗಿ ನೀವು ಈ ಸಿನಿಮೋತ್ಸವನ್ನು ವೀಕ್ಷಿಸಬಹುದಾಗಿದೆ.

Science Gallery Bengaluru ವೆಬ್​ ಸೈಟ್​ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆಗ ಸಿನಿಮೋತ್ಸವಕ್ಕೆ ಉಚಿತವಾಗಿ ಎಂಟ್ರಿ ಪಡೆಯಬಹುದಾಗಿದೆ.