ಸುಳ್ಯ(ದಕ್ಷಿಣಕನ್ನಡ): ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದ ಇಬ್ಬರ ಮೃತದೇಹ ಇಂದು ಪತ್ತೆಯಾಗಿವೆ.
ಕಾರು ಬಿದ್ದ ಜಾಗದಿಂದ ಸುಮಾರು 250ಮೀ ದೂರದಲ್ಲಿ ಒಂದು ಮೃತದೇಹವನ್ನು ಸ್ಥಳೀಯರು ಮೊದಲು ನೋಡಿದ್ದು, ನಂತರದಲ್ಲಿ ಇನ್ನೊಂದು ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಬೈತಡ್ಕ ಸೇತುವೆಯಿಂದ 250 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಎಂಬವರ ಮನೆಯ ಬಳಿಯ ಹೊಳೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಜುಲೈ 10 ರಂದು ಮಧ್ಯರಾತ್ರಿ 12.30 ರ ಸುಮಾರಿಗೆ ಬೈತಡ್ಕ ಮಸೀದಿ ಬಳಿ ಮಾರುತಿ 800 ಕಾರು ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು, ಕಾರು ಚಾಲಕ ಧನುಷ್ (26), ಸಹ ಪ್ರಯಾಣಿಕ ಧನುಷ್ (21) ಕಾಣೆಯಾಗಿದ್ದರು. ಇವರು ಸಂಚರಿಸಿದ ಕಾರನ್ನು ಅಂದೇ ನದಿಯಿಂದ ಮೇಲೆಕ್ಕೆತ್ತಲಾಗಿತ್ತು.