ಮನೆ ಸುದ್ದಿ ಜಾಲ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್ ಉರುಳಿ ಇಬ್ಬರು ಸಾವು

ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್ ಉರುಳಿ ಇಬ್ಬರು ಸಾವು

0

ಮಧ್ಯಪ್ರದೇಶ : ಮಧ್ಯಪ್ರದೇಶದ ಧಾರ್​ನಲ್ಲಿ ಸೇತುವೆ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಉರುಳಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ಸವಾರ ಸೇರಿದಂತೆ ಹಲವಾರು ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಅಪಘಾತದಲ್ಲಿ ಎರಡು ಕಾರುಗಳು ಸಹ ನಜ್ಜುಗುಜ್ಜಾಗಿವೆ. ಟ್ರಕ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕೆಲವರು ಕ್ರೇನ್ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ.

ಮೃತರನ್ನು ಜಬಲ್ಪುರದ ನಿವಾಸಿಗಳಾದ ಕಪಿಲ್ ಸಹಾನಿ (50), ಅಮಿತ್ ಅಗರ್ವಾಲ್ (51) ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಲ್ಲಿ ಸಮಗ್ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕ್ರೇನ್ ಇದ್ದಕ್ಕಿದ್ದಂತೆ ಉರುಳಿ ಹಾದುಹೋಗುತ್ತಿದ್ದ ಪಿಕಪ್ ಟ್ರಕ್ ಮೇಲೆ ಬಿದ್ದಿತು ಎಂದು ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ತಿಳಿಸಿದ್ದಾರೆ.