ಚಂಡೀಗಢ: ಜಲಂಧರ್ ನಲ್ಲಿ ಗುಂಡಿನ ಚಕಮಕಿಯ ನಡೆಸಿದ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಬುಧವಾರ(ನ27) ತಿಳಿಸಿದ್ದಾರೆ.
ಬಂಧಿತ ಇಬ್ಬರೂ ಕ್ರಿಮಿನಲ್ ಗಳು ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು, ಅವರಿಂದ ಮೂರು ಆಯುಧಗಳ ಜತೆಗೆ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಜಲಂಧರ್ ಕಮಿಷನರೇಟ್ ಪೊಲೀಸರು ‘ಜಲಂಧರ್ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸಹಚರರನ್ನು ಹಾಟ್ ಚೇಸ್ ಮತ್ತು ಶೂಟೌಟ್ ನಂತರ ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬೆನ್ನಟ್ಟುವ ವೇಳೆ ಶಂಕಿತರು ಗುಂಡು ಹಾರಿಸಿದ್ದು, ಪ್ರತೀಕಾರವಾಗಿ ಪೊಲೀಸರೂ ಗುಂಡು ಹಾರಿಸಿದರು. ಬಂಧಿತ ವ್ಯಕ್ತಿಗಳ ವಿರುದ್ಧ ಸುಲಿಗೆ, ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಎನ್ಡಿಪಿಎಸ್ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ, ”ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಪ್ರಕಟಿಸಲಾಗಿದೆ.














