ಬೆಂಗಳೂರು: ಸಿಸಿಬಿ ಇನ್ಸ್ಪೆಕ್ಟರ್ ಶಂಕರ ನಾಯಕ್ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಗೆ ಮತ್ತೆರಡು ದೂರು ಸಲ್ಲಿಕೆ ಮಾಡಲಾಗಿದೆ.
ಪ್ರಕರಣ ಸಂಬಂಧ ಶಂಕರ ನಾಯಕ್ 8.85 ಲಕ್ಷ ರೂ. ವಶಕ್ಕೆ ಪಡೆದಿದ್ದರು. ಹಣ ಹಿಂದಿರುಗಿಸಲು ಸೂಚಿಸುವಂತೆ ಬೆಂಗಳೂರಿನ 31ನೇ ಎಸಿಎಂಎಂ ಕೋರ್ಟ್ಗೆ ವಸಂತಾ ಅರ್ಜಿ ಸಲ್ಲಿಸಿದ್ದರು.
ಹಣ ಹಿಂದಿರುಗಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಆದರೆ ಹಣ ಬಿಡುಗಡೆ ಮಾಡದೆ ಶಂಕರ ನಾಯಕ್ ಸತಾಯಿಸಿದ್ದಾರೆ. ಬಿಳಿಹಾಳೆ ಮೇಲೆ ಸಹಿ ಹಾಕುವಂತೆ ಹೇಳಿದ್ದರಂತೆ. ಸಹಿ ಹಾಕಲು ಒಪ್ಪದಿದ್ದಾಗ ಕೇಸ್ ಹಾಕುವುದಾಗಿ ಬೆದರಿಕೆ ಆರೋಪ ಮಾಡಲಾಗಿದೆ.
ಶಂಕರ ನಾಯಕ್ ವಿರುದ್ಧ ಪಶ್ಚಿಮ ವಿಭಾಗದ ಡಿಸಿಪಿಗೆ ಪುತ್ರ ಸುಮಿತ್ ರನ್ನು ಅಕ್ರಮ ಬಂಧನದಲ್ಲಿರಿಸಿದ ಆರೋಪದಡಿ ದೂರು ನೀಡಲಾಗಿದೆ.
ಸಿಪಿಯು, ಲ್ಯಾಪ್ ಟಾಪ್, ಪೆನ್ ಡ್ರೈವ್ ಹಿಂದಿರುಗಿಸಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗೆ ಸಂಧ್ಯಾ ರಮೇಶ್ ಎಂಬುವರಿಂದ ದೂರು ನೀಡಲಾಗಿದೆ.