ಮನೆ ಅಪರಾಧ ಕೆರೆಯಲ್ಲಿ ಈಜಲು ತೆರಳಿದ್ದ 6 ಬಾಲಕರ ಪೈಕಿ ಇಬ್ಬರು ನೀರುಪಾಲು

ಕೆರೆಯಲ್ಲಿ ಈಜಲು ತೆರಳಿದ್ದ 6 ಬಾಲಕರ ಪೈಕಿ ಇಬ್ಬರು ನೀರುಪಾಲು

0

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆಯಲ್ಲಿ ಈಜಲು ತೆರಳಿದ್ದ 6 ಬಾಲಕರ ಪೈಕಿ ಇಬ್ಬರು ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.

Join Our Whatsapp Group

ಇಂದು ಬೆಳಿಗ್ಗೆ 8.30ರ ಸುಮಾರಿಗೆ ಸಮೀಪದ ಹೊಸೂರಿನ ಬಾಲಕರು ಈಜಲು ತೆರಳಿದ್ದು, ಅದರಲ್ಲಿ ಹೊಸೂರಿನ ಸಂಜಯ ತಳವಾರ (13) ಹಾಗೂ ನಂದಗಾಂವದ ಸಮರ್ಥ ಜುಲ್ಪಿ (10) ಸಾವಿಗೀಡಾದ ಬಾಲಕರು.

ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಕಾಂಗ್ರೆಸ್​ ಶಾಸಕ ಮಹಾಂತೇಶ ಕೌಜಲಗಿ ಕಾರು ಅಪಘಾತ
ಮುಂದಿನ ಲೇಖನಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣ: ಅಧಿಕಾರ ಕೈಗೆತ್ತಿಕೊಂಡ ಮೊಹಮ್ಮದ್ ಮೊಖ್ಬರ್