ಮನೆ ಸುದ್ದಿ ಜಾಲ ತುರ್ತು ಭೂ ಸ್ಪರ್ಶದ ಸಮಯದಲ್ಲಿ ಎರಡು ತುಂಡಾದ ವಿಮಾನ

ತುರ್ತು ಭೂ ಸ್ಪರ್ಶದ ಸಮಯದಲ್ಲಿ ಎರಡು ತುಂಡಾದ ವಿಮಾನ

0

ಸ್ಯಾನ್ ಜೋಸ್(San jos): ತುರ್ತು ಭೂಸ್ಪರ್ಶದ(Emergency Landing) ಸಮಯದಲ್ಲಿ ಸರಕು ವಿಮಾನ(Plane)ವೊಂದು ಎರಡು ತುಂಡಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.  ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು, ವಿಮಾನ ರನ್‌ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ.

ಅದೇನೇ ಇದ್ದರೂ, ಗ್ವಾಟೆಮಾಲ ಮೂಲದ ಸಿಬ್ಬಂದಿಯನ್ನು ‘ವೈದ್ಯಕೀಯ ತಪಾಸಣೆಗಾಗಿ’ಆಸ್ಪತ್ರೆಗೆ ಕಳುಹಿಸಲಾಗಿದೆ. ಪೈಲಟ್ ಕೊಂಚ ವಿಚಲಿತರಾದರೂ ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿದ್ದು, ‘ಎಲ್ಲವೂ ಅವರಿಗೆ ಸ್ಪಷ್ಟವಾಗಿ ನೆನಪಿದೆ’ಎಂದು ವಾಸ್ಕ್ವೆಜ್ ಹೇಳಿದರು.

ಬೋಯಿಂಗ್-757 ವಿಮಾನವು ಸ್ಯಾನ್ ಜೋಸ್‌ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು ಬೆಳಿಗ್ಗೆ 10:30ರ ಸಂದರ್ಭ ಇಳಿಯುವ ವೇಳೆ ಅಪಘಾತ ಸಂಭವಿಸಿದೆ. ಯಾಂತ್ರಿಕ ವೈಫಲ್ಯದಿಂದಾಗಿ ತುರ್ತು ಲ್ಯಾಂಡಿಂಗ್‌ಗೆ ಮುಂದಾದಾಗ ಈ ಅಪಘಾತ ಸಂಭವಿಸಿದೆ.

ಹಿಂದಿನ ಲೇಖನಏ.೧೦ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ
ಮುಂದಿನ ಲೇಖನನೆರೆಮನೆಯವನ ತಲೆ ಕಡೆದು ಜಮೀನಿನಲ್ಲಿ ಹೂತಿಟ್ಟಿದ್ದ ವ್ಯಕ್ತಿಯ ಬಂಧನ