ಮನೆ ಅಪರಾಧ ಪಾರ್ಟಿ ಬಳಿಕ ಇಬ್ಬರು ರೌಡಿಶೀಟರ್’ಗಳ ಜಗಳ: ಓರ್ವನ ಕೊಲೆಯಲ್ಲಿ ಅಂತ್ಯ

ಪಾರ್ಟಿ ಬಳಿಕ ಇಬ್ಬರು ರೌಡಿಶೀಟರ್’ಗಳ ಜಗಳ: ಓರ್ವನ ಕೊಲೆಯಲ್ಲಿ ಅಂತ್ಯ

0

ಬೆಂಗಳೂರು: ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ ಬಳಿಕ ಇಬ್ಬರು ರೌಡಿ ಶೀಟರ್ ಗಳ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಘಟನೆ ಮಹದೇಶ್ವರ ದೇವಾಲಯದ ಬಳಿ ನಡೆದಿದೆ.

Join Our Whatsapp Group

ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಕೊಲೆಯಾದವ. ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಅಲಿಯಾಸ್ ಕೆ ಕೊಲೆ ಮಾಡಿದ ಆರೋಪಿ.

ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದ ಸಾಗರ್​ ಹಾಗೂ ನವೀನ್. ಬಳಿಕ ಮಾತಿಗೆ ಮಾತು ಬೆಳೆದು ಸಾಗರ್, ನವೀನ್ ನಡುವೆ ಜಗಳ ಶುರುವಾಗಿದೆ. ಈ ವೇಳೆ ಲಾಂಗ್ ​​ನಿಂದ ಹಲ್ಲೆ ಮಾಡಿದ್ದ ನವೀನ್ ಸಾಗರ್​ನನ್ನು​ ಕೊಲೆಗೈದಿದ್ದಾನೆ.

ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರೌಡಿಶೀಟರ್ ನವೀನ್ ​​​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.