ಬೆಂಗಳೂರು : ವಾಹನಗಳ ಚಾಲಕರ ಬಳಿ ಲಂಚ ಪಡೆಯುತ್ತಿದ್ದ, ಬೆಂಗಳೂರು ಹೊರವಲಯ ನೆಲಮಂಗಲದ ಇಬ್ಬರು ಆರ್ಟಿಓ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಡಾ.ಕೋನ ವಂಶಿ ಕೃಷ್ಣ ನೇತೃತ್ವದಲ್ಲಿ ಟ್ರ್ಯಾಪ್ ಮಾಡಲಾಗಿದೆ. ನೆಲಮಂಗಲ ಆರ್ಟಿಓ ಇನ್ಸ್ಪೆಕ್ಟರ್ ಅಧಿಕಾರಿಗಳಾದ ದಿನೇಶ್ ಹಾಗೂ ಕಿರಣ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದ ಇಬ್ಬರು ಆರ್ಟಿಓ ಅಧಿಕಾರಿಗಳು ವಾಹನಗಳ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿದ್ದಾರೆ ಎಂಬ ದೂರು ಸಂಬಂಧ ಮಾಹಿತಿ ಆಧಾರದ ಮೇರೆಗೆ ಲೋಕಾ ಅಧಿಕಾರಿಗಳು ಇಬ್ಬರನ್ನೂ ಟ್ರ್ಯಾಪ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.















