ಶ್ರೀನಗರ (Srinagar)- ಭಾರತೀಯ ಸೇನಾಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.
ಇಂದು ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಎನ್ ಕೌಂಟರ್ ನಡೆಸಿದ ಭದ್ರತಾ ಪಡೆ ಇಬ್ಬರನ್ನು ಹೊಡೆದುರುಳಿಸಿದೆ.
ಹತ್ಯೆಯಾದ ಉಗ್ರರನ್ನು ಹತರಾದ ಉಗ್ರರನ್ನು ತ್ರಾಲ್ ಎಂಬಲ್ಲಿನ ಶಹೀದ್ ರಾಥರ್ ಮತ್ತು ಶೋಪಿಯಾನ್ನ ಉಮರ್ ಯೂಸುಫ್ ಎಂದು ಗುರುತಿಸಲಾಗಿದೆ.
ಭಯೋತ್ಪಾದಕ ಕೃತ್ಯಗಳನ್ನು ಹೊರತುಪಡಿಸಿ, ಶಹೀದ್ ರಾಥರ್ ಎಂಬಾತ ಈ ಹಿಂದೆ, ಅರಿಪಾಲ ನಿವಾಸಿ ಹಾಗೂ ಸರ್ಕಾರಿ ಉದ್ಯೋಗಿ ಶಕೀಲಾ ಹಾಗು ಲುರ್ಗಮ್ ತ್ರಾಲ್ನ ಸರ್ಕಾರಿ ಕಚೇರಿಯ ಜವಾನ ಜಾವಿದ್ ಅಹಮದ್ ಎಂಬಿಬ್ಬರನ್ನು ಹತ್ಯೆ ಮಾಡಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.