ಮನೆ ಕಾನೂನು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ

0

ಮಂಡ್ಯ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಡ್ಯದ ಟ್ರಾಫಿಕ್ ಠಾಣೆಯಲ್ಲಿ ನಡೆದಿದೆ.

ಮಂಡ್ಯ ಟ್ರಾಫಿಕ್ ಠಾಣೆಯ ಕುಮಾರ್ ಮತ್ತು ಮಹದೇವು ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸರು. ಇವರು ಸಯ್ಯದ್ ಪಾಷ ಎಂಬುವವರ ಬಳಿ 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಜನವರಿ 25 ರಂದು ಸಯ್ಯದ್ ಪಾಷ ಬೈಕ್ ಅಪಘಾತವಾಗಿತ್ತು. ಇದರ ಬಳಿಕ ಮಂಡ್ಯ ಟ್ರಾಫಿಕ್ ಪೊಲೀಸರು ಬೈಕ್ ಸೀಝ್ ಮಾಡಿದ್ದರು. ತನಿಖೆ ನಂತರ ಬೈಕ್ ಬಿಡುಗಡೆ ಮಾಡಲು ಈ ಇಬ್ಬರು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಸಯ್ಯದ್ ಪಾಷ ಅವರು ನಂತರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚ ಪಡೆಯುವಾಗ ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.