ಚಿತ್ರದುರ್ಗ: ಹೊಸದುರ್ಗ ಖಜಾನೆ ಕಚೇರಿಯಲ್ಲಿ ಲೋಕಾಯುಕ್ತ ರೇಡ್ ನಡೆದಿದ್ದು, ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಲೋಕಾ ಬಲೆಗೆ ಬಿದ್ದ ಘಟನೆ ಡಿ. 18ರ ಬುಧವಾರ ನಡೆದಿದೆ.
ಎಫ್.ಡಿ.ಎ. ವರಲಕ್ಷ್ಮಿ ಹಾಗೂ ಮುಖ್ಯ ಲೆಕ್ಕಿಗ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
ಶಿಕ್ಷಕಿಯ ಪೆನ್ಷನ್ ಹಣ ಕ್ಲಿಯರ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು, ನಿವೃತ್ತ ಶಿಕ್ಷಕಿ ಶಾರದಮ್ಮ ಅವರ ಬಳಿ 2 ಸಾವಿರ ಲಂಚ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ಪಿ.ಐ. ಗುರುಬಸವರಾಜ್, ಮಂಜುನಾಥ್, ದಾಳಿಯಲ್ಲಿ ಭಾಗಿಯಾಗಿದ್ದರು.