ನವದೆಹಲಿ : ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಒಂದೇ ಸೀಟಿಗಾಗಿ ಜುಟ್ಟು ಹಿಡಿದು ಜಗಳವಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ನೇರಳೆ ಮಾರ್ಗದ ಬದ್ಖಲ್ ಮೋರ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಒಂದು ಸೀಟಿಗಾಗಿ ಆರಂಭವಾದ ವಾಗ್ವಾದ ಗಲಾಟೆಯಾಗಿ ಪರಿವರ್ತನೆಯಾಯಿತು, ಅಲ್ಲಿಂದ ಪರಸ್ಪರ ಕೂದಲು ಎಳೆಯುವುದು, ಹೊಡೆಯುವುದು, ನೂಕಾಡುವುದನ್ನು ಮಾಡಿದರು. ಜೊತೆಗೆ ಕುಸ್ತಿಯಾಡುವಾಗ ಒಬ್ಬರ ಮೇಲೆ ಇನ್ನೊಬ್ಬರು ಬೀಳುವಂತೆ ಜಗಳವಾಡಿದರು. ಈ ವಿಡಿಯೋವನ್ನು ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೆಟ್ರೋ ಯಾವಾಗಲೂ ಮನರಂಜನೆ ನೀಡುತ್ತದೆ ಎಂದು ಬರೆದುಕೊಂಡಿದ್ದು, ಮೆಟ್ರೋದಲ್ಲಿ ಇನ್ನೂ ಹಲವಾರು ಸೀಟುಗಳು ಖಾಲಿಯಿದ್ದರೂ ಕೂಡ ಈ ಇಬ್ಬರು ಮಹಿಳೆಯರು ಒಂದೇ ಸೀಟಿಗಾಗಿ ಹೊಡೆದಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಮಾಡಿದ್ದು, ದೆಹಲಿ ಮೆಟ್ರೋ ಯಾವತ್ತಿಗೂ ಜನರನ್ನು ನಿರಾಶೆಗೊಳಿಸುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.















