ಮನೆ Uncategorized ಗುಬ್ಬಿ: ಇಬ್ಬರು ಯುವಕರ ಹತ್ಯೆ

ಗುಬ್ಬಿ: ಇಬ್ಬರು ಯುವಕರ ಹತ್ಯೆ

0

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರು ಹತ್ಯೆಯಾಗಿದ್ದು, ಒಬ್ಬರ ಶವ ನೀರಿನಲ್ಲಿ, ಮತ್ತೊಬ್ಬರ ಶವ ರಸ್ತೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪೆದ್ದನಹಳ್ಳಿಯ ಗಿರೀಶ್ (35) ಹಾಗೂ ಮಂಚಲದೊರೆ ಗ್ರಾಮದ ಗಿರೀಶ್(33) ಎಂದು ಗುರುತಿಸಲಾಗಿದೆ.

ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹತ್ಯೆಗೀಡಾಗಿರುವ ಯುವಕರು ಅನೇಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಗುಬ್ಬಿ ಹಾಗೂ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಗುಬ್ಬಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಹಿಜಾಬ್ ವಿವಾದ: ಪ್ರವೇಶ ಪತ್ರ ಪಡೆದು ಪರೀಕ್ಷೆ ಬರೆಯದ ವಿದ್ಯಾರ್ಥಿನಿಯರು
ಮುಂದಿನ ಲೇಖನಚಾಮುಂಡಿ ಬೆಟ್ಟದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಪುತ್ಥಳಿ ಅನಾವರಣ