ಮನೆ ಯೋಗಾಸನ ದಂಡಾಸನ ಯೋಗಾಭ್ಯಾಸದ ಪ್ರಕಾರಗಳು ಮತ್ತು ಉಪಯೋಗ

ದಂಡಾಸನ ಯೋಗಾಭ್ಯಾಸದ ಪ್ರಕಾರಗಳು ಮತ್ತು ಉಪಯೋಗ

0

ದೇಹದ ಸದೃಢತೆಗೆ ವಿವಿಧ ಬಗೆಯ ವ್ಯಾಯಾಮಗಳನ್ನು ಮೈಗೂಡಿಸಿಕೊಂಡು ಆರೋಗ್ಯಕರವಾದ ಮೈ ಕಟ್ಟನ್ನು ಹೊಂದಬೇಕು ಎಂಬುದು ಹಲವರ ಅಭಿಲಾಷೆ.

ಅದಕ್ಕೆ ತಕ್ಕಂತೆ ಅವರ ವಯಸ್ಸಿಗೆ ಅನುಗುಣವಾಗಿ ಇರುವ ವ್ಯಾಯಾಮದ ಉಪಕರಣಗಳನ್ನು ಉಪಯೋಗ ಮಾಡಿಕೊಂಡು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಹಲವರಿಂದ ಸದ್ದಿಲ್ಲದೆ ಯೋಗಾಭ್ಯಾಸ ಕೂಡ ನಡೆಯುತ್ತಿದೆ. ಆದರೆ ವ್ಯಾಯಾಮದ ಅಭ್ಯಾಸ ಪ್ರತಿ ದಿನ ಮಾಡುವವರು ಯೋಗಾಭ್ಯಾಸದ ಬಗ್ಗೆ ಅಷ್ಟು ಆಸಕ್ತಿ ವಹಿಸುವುದಿಲ್ಲ.

ಯೋಗಾಭ್ಯಾಸದ ವಿವಿಧ ಭಂಗಿಗಳಲ್ಲಿ ಒಂದಾದ ದಂಡಾಸನ ಪ್ರಕ್ರಿಯೆಯನ್ನು ಸ್ವಲ್ಪ ಆಚೆ ಈಚೆ ಮಾಡಿಕೊಂಡು ಟ್ರೈ ಮಾಡುವುದರಿಂದ ವ್ಯಾಯಾಮದಷ್ಟೇ ಪ್ರಬಲವಾಗಿ ನಮ್ಮ ದೈಹಿಕ ಸದೃಢತೆಯನ್ನು ನಿರ್ವಹಣೆ ಮಾಡಿಕೊಳ್ಳುವಲ್ಲಿ ಅನುಕೂಲವಾಗುತ್ತದೆ ಎಂದು ಹೇಳಬಹುದು.

ದಂಡಾಸನ ಭಂಗಿಯ ವಿವಿಧ ಪ್ರಯೋಗಗಳನ್ನು ಈ ಕೆಳಗಿನ ರೀತಿ ಟ್ರೈ ಮಾಡಬಹುದು

ದಂಡಾಸನ ಭಂಗಿಯ ಪ್ರಕಾರ 1

ಮೊದಲು ಯೋಗ ಮ್ಯಾಟ್’ನ ಮೇಲೆ ಹಸುವಿನ ಭಂಗಿಯಲ್ಲಿ ಎರಡು ಕೈಗಳು ಮತ್ತು ಎರಡು ಮಂಡಿಗಳ ಮೇಲೆ ನಿಂತುಕೊಳ್ಳುವ ಪ್ರಯತ್ನ ಮಾಡಬೇಕು.

ಈಗ ಕಾಲುಗಳ ಹಿಂಭಾಗದಲ್ಲಿ ಸುಮಾರು ಒಂದು ಅಡಿ ಎತ್ತರದ ಒಂದು ಮರದ ಸ್ಟೂಲ್ ಅಥವಾ ಬೆಂಬಲಕ್ಕೆ ಏನಾದರೂ ಇಟ್ಟುಕೊಳ್ಳಬೇಕು.

ಕೈಗಳನ್ನು ಮೊದಲಿನ ಹಾಗೆ ಒಂದೇ ಕಡೆ ಇಟ್ಟುಕೊಂಡು ಕಾಲುಗಳನ್ನು ಮಾತ್ರ ಹಿಂದಕ್ಕೆ ಚಾಚಿ ಸ್ವಲ್ಪ ಎತ್ತರದಲ್ಲಿ ಇಟ್ಟುಕೊಳ್ಳಬೇಕು. ಈ ಸಮಯದಲ್ಲಿ ಹೊಟ್ಟೆಯ ಭಾಗ ಒಳಗಿರಬೇಕು. ಅಂದರೆ ಸೊಂಟದ ಭಾಗದ ಸದೃಢತೆಯನ್ನು ಕಾಯ್ದುಕೊಳ್ಳಬೇಕು.

ಎರಡು ಕಾಲುಗಳನ್ನು ಹಿಂಬದಿಗೆ ನೇರವಾಗಿ ಚಾಚಿ ನಿಂತುಕೊಂಡ ನಂತರ ಒಂದೊಂದೇ ಕಾಲಿನ ಮಂಡಿಯ ಭಾಗ ಮೊಣಕೈ ಭಾಗಕ್ಕೆ ತಾಗುವಂತೆ ಮುಂದಕ್ಕೆ ತಂದು ಹಿಂದಕ್ಕೆ ವಾಪಸ್ ತೆಗೆದುಕೊಳ್ಳಬೇಕು. ಅಂದರೆ ಎಡ ಭಾಗದ ಮೊಣಕೈ ಭಾಗಕ್ಕೆ ಎಡಗಾಲು ಹಾಗೂ ಬಲ ಭಾಗದ ಮೊಣಕೈ ಭಾಗಕ್ಕೆ ಬಲಗಾಲು ಮಂಡಿಯನ್ನು ತಾಗಿಸಬೇಕು.

ಈ ರೀತಿ ಸುಮಾರು 10 ರಿಂದ 20 ಬಾರಿ ಮಾಡಬೇಕು.

ಈ ಪ್ರಕ್ರಿಯೆ ಮುಗಿದ ನಂತರ ಎಡ ಭಾಗದ ಮೊಣಕೈ ಭಾಗಕ್ಕೆ ಬಲಗಾಲು ಹಾಗೂ ಬಲ ಭಾಗದ ಮೊಣಕೈ ಭಾಗಕ್ಕೆ ಎಡಗಾಲು ಮಂಡಿಯನ್ನು ತಾಗಿಸುವ ಪ್ರಯತ್ನ ಮಾಡಬೇಕು.

ಈ ತರಹ ಸಹ ಸುಮಾರು 10 ರಿಂದ 20 ಬಾರಿ ಮಾಡಬೇಕು.

ಸಾಧ್ಯ ಆದರೆ ಈ ಮೇಲಿನ ಎರಡು ತರಹದ ಪ್ರಕ್ರಿಯೆಗಳನ್ನು ಎರಡೆರಡು ಬಾರಿ ಟ್ರೈ ಮಾಡಿ.

ಇದರಿಂದ ತೊಡೆಗಳ ಭಾಗ, ಹೊಟ್ಟೆಯ ಭಾಗ ಹಾಗೂ ತೋಳಗಳ ಭಾಗಕ್ಕೆ ಅತ್ಯುತ್ತಮ ವ್ಯಾಯಾಮ ದೊರಕಿದಂತೆ ಆಗುತ್ತದೆ. ಈ ಭಾಗಗಳಲ್ಲಿ ಕಂಡು ಬರುವ ಬೊಜ್ಜಿನ ಪ್ರಮಾಣ ಕಡಿಮೆ ಆಗುತ್ತದೆ.