ಮನೆ ವ್ಯಕ್ತಿತ್ವ ವಿಕಸನ ನೆನಪಿನ ವಿಧಗಳು

ನೆನಪಿನ ವಿಧಗಳು

0

ಕಲಿತ ಕಲಿತ ವಿಷಯಗಳು ಚೆನ್ನಾಗಿ ನೆನಪಿನಲ್ಲಿ ಉಳಿಯಲು ನೆನಪಿನ ಬೇರೆ ಬೇರೆ ವಿಧಗಳನ್ನು ತಿಳಿದುಕೊಳ್ಳುವುದು ಸಹಾಯಕವಾಗುತ್ತದೆ. ಆಗ ವಿಷಯಗಳು ಯಾವ ರೂಪದಲ್ಲಿ ನಮ್ಮೊಳಗೆ ಉಳಿದುಕೊಂಡಿವೆ ಎಂದು ಗೊತ್ತಾಗುವುದರಿಂದ ಕಲಿತ ವಿಷಯಗಳ ವರ್ಗೀಕರಣದ ಅರಿವು ಉಂಟಾಗುತ್ತದೆ. ಆದ್ದರಿಂದ ನೆನಪಿನ ಬಲ ಜಾಸ್ತಿಯಾಗುತ್ತದೆ.

ಉರಿಬಿಸಿಲು, ಬಿರುಮಳೆ, ಕೊರೆಯುವ ಚಳಿಗಾಳಿ ಮುಂತಾದ ಅನುಭವಗಳು ಪ್ರಾಥಮಿಕ ನೆನಪುಗಳಾಗಿ ನಮ್ಮಲ್ಲಿ ಉಳಿಯುತ್ತವೆ. ಕೆಲವೊಮ್ಮೆ ನಮ್ಮಲ್ಲಿ ಯಾವ ವಿಚಾರಗಳಿವೆ ಎಂದು ನಮ್ಮಗೆ ಗೊತ್ತಿರುವುದಿಲ್ಲ. ಆದರೆ ಸೂಕ್ತ ಸಂದರ್ಭದಲ್ಲಿ ನೆನಪಿಗೆ ಬಂದು ಸಹಾಯಮಾಡುತ್ತದೆ. ಇಂತಹ ನೆನಪುಗಳನ್ನ ಅಂತರ್ಗತ ನೆನಪು ಎಂದು ಕರೆಯಲಾಗಿದೆ.

ವ್ಯಾಕರಣಕಾಂಶಗಳು, ಶಬ್ದ ಸಂಗ್ರಹ, ಗಣಿತ- ವಿಜ್ಞಾನ ಸೂತ್ರಗಳಿಲ್ಲ ಭಾಷಾ ನೆನಪುಗಳಾಗಿವೆ. ಕುದುರೆ ಸವಾರಿ, ಡ್ರೈವಿಂಗ್ ನಂತಹ ಕೌಶಲಗಳು ವೈಧಾನಿಕ ನೆನಪುಗಳಾಗಿವೆ. ನಮ್ಮ ಪ್ರೀತಿ ಪಾತ್ರರಾದವರ ಹೆಸರು ಕೇಳಿದಾಗ ಹಿತಾನುಭವವಾಗುವುದು, ನಮಗೆ ಕೆಟ್ಟದ್ದನ್ನು ಮಾಡಿದವರ ಹೆಸರು ಕೇಳಿದಾಗ ಸಿಟ್ಟಿಗೆಳುವುದು, ಇವೆಲ್ಲ ಭಾವನಾತ್ಮಕ ನೆನಪುಗಳಾಗಿವೆ. ನಮ್ಮ ಜೀವನದ ಅತ್ಯಂತ ಸಂತೋಷದ ಘಟನೆ ಅತ್ಯಂತ ದುಃಖದ ಘಟನೆಗಳೆಲ್ಲ ನೆನಪಿನಲ್ಲಿರುತ್ತದೆ. 

ಈ ನೆನಪುಗಳು ಘಟನಾ ನೆನಪುಗಳಾಗಿವೆ. ಕೆಲವು ವಸ್ತುಗಳ ಹೆಸರುಗಳು ನಮ್ಮ ನೆನಪಿಗೆ ಬಾರದೆ ಇರಬಹುದು. ಆದರೆ ಅವುಗಳ ಆಕಾರ, ಗಾತ್ರ, ಬಣ್ಣಗಳೆಲ್ಲ ನೆನಪಿಗೆ ಬರುತ್ತದೆ. ಇಂತಹ ನೆನಪುಗಳನ್ನ ದೃಶ್ಯಬಿಂಬ ನೆನಪು ಎಂದು ಕರೆಯಲಾಗಿದೆ.

ನೆಚ್ಚಿನ ನಟ-ನಟಿಯ ಧ್ವನಿ,  ಕೋಗಿಲೆಯ ಧ್ವನಿ, ನಾಯಿ ಬೊಗಳುವ ಧ್ವನಿ, ನೀವೆಲ್ಲ ಕೇಳಿದ ತಕ್ಷಣ ಗುರುತಿಸಬಹುದಾದ ದ್ವನಿಗಳಾಗಿರುತ್ತವೆ. ಇವನ ಶ್ರವಣಬಿಂಬ ನೆನಪು ಎಂದು ಗುರುತಿಸಲಾಗಿದೆ.

ಈ ಕಲಿಕೆಯ ವಿಚಾರಕ್ಕೆ ಬನ್ನಿ, ಸೂತ್ರಗಳು, ವ್ಯಾಕರಣಾಂಶಗಳೆಲ್ಲ ಯಾಂತ್ರಿಕ ವಿಚಾರಗಳು. ಸೂತ್ರದ ಮೂಲಕ ಲೆಕ್ಕವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಸೂತ್ರವನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ಈ ಯಾಂತ್ರಿಕವಾಗಿ ಕಲಿಯಬೇಕಾದದ್ದನ್ನು ಭಾಷಾ ನೆನಪು ಎಂಬ ಗುಂಪಿನಲ್ಲಿ ಶೇಖರಿಸಬೇಕಾಗುತ್ತದೆ. ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಬರುವ ಅನೇಕ ಅಂಶಗಳ ದೃಶ್ಯಬಿಂದು ಮತ್ತು ಶ್ರವಣಬಿಂಬ ನೆನಪುಗಳಾಗಿರಲು ಸೂಕ್ತವಾದವುಗಳಾಗಿರುತ್ತದೆ.

ಕಂಪ್ಯೂಟರ್ ಸಹಾಯದಿಂದ ಪಾಠ ಬೋಧನೆ ನಡೆಸಿದರೆ, ತಾನೇ ತನಗೆ ಅವು ದೃಶ್ಯಬಿಂಬ ಮತ್ತು ಶ್ರವಣಬಿಂಬ ನೆನಪುಗಳಾಗಿ ಮಾರ್ಪಡುತ್ತದೆ. ಒಂದು ವೇಳೆ ಪಾಠ ಬೋಧನೆಯು ಆ ರೀತಿಯಲ್ಲಿ ನಡೆಯದೇ ಇದ್ದರೂ ಕಲಿತ ಪಾಠಗಳು ಒಂದು ದೃಶ್ಯ ಸರಣಿಯಾಗಿ ಅರ್ಥ ಮಾಡಿಕೊಂಡು ಕಲ್ಪಿಸಿಕೊಳ್ಳಬೇಕು. ಆಗ ಈ ವಿಚಾರಗಳು ಸೂಕ್ತವಾಗಿ ನೆನಪಿನಲ್ಲಿ ಉಳಿಯುತ್ತದೆ.

ಹಿಂದಿನ ಲೇಖನಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ರೈತರ ಹಿತ ಕಾಯುವುದು ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ
ಮುಂದಿನ ಲೇಖನತುಮಕೂರು:  ಸಿದ್ಧತೆಯಿಲ್ಲದೆ ಸಭೆಗೆ ಬಂದ‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಜಿ.ಪರಮೇಶ್ವರ್