ಮನೆ ಮನರಂಜನೆ ‘ಜವಾನ್’ ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ನಿಂದ ಯುಎ ಪ್ರಮಾಣಪತ್ರ

‘ಜವಾನ್’ ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ನಿಂದ ಯುಎ ಪ್ರಮಾಣಪತ್ರ

0

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಶೇಷ ಎಂದರೆ ಚಿತ್ರದ ಯಾವುದೇ ದೃಶ್ಯಕ್ಕೆ ಕತ್ತರಿ ಪ್ರಯೋಗ ಆಗಿಲ್ಲ. ಇದು ಶಾರುಖ್ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಜವಾನ್’ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಎಲ್ಲರೂ ಸಿನಿಮಾ ವೀಕ್ಷಿಸಬಹುದು. ಆದರೆ, 18 ವರ್ಷ ಒಳಗಿನವರು ಪೋಷಕರ ಮಾರ್ಗದರ್ಶನದಲ್ಲಿ ಸಿನಿಮಾ ನೋಡಬಹುದು. ಇನ್ನು ಸಿನಿಮಾದ ಅವಧಿ 169.14 ನಿಮಿಷ ಇದೆ. ಅಂದರೆ ಸಿನಿಮಾದ ರನ್ ​ಟೈಮ್ ಎರಡು ಗಂಟೆ ನಲವತ್ತೊಂಭತ್ತು ನಿಮಿಷ ಇರಲಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ನಿರೀಕ್ಷಿಸಲಾಗುತ್ತಿದೆ.

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಕಾರಣದಿಂದ ಶಾರುಖ್ ಖಾನ್ ಅಭಿಮಾನಿಗಳಿಗೆ ‘ಜವಾನ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರೋ ಅಟ್ಲೀ ಅವರು ‘ಜವಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ದಕ್ಷಿಣ ಭಾರತದ ಕಲಾವಿದರಾದ ನಯನತಾರಾ, ವಿಜಯ್​ ಸೇತುಪತಿ ಮೊದಲಾದವರು ನಟಿಸಿದ್ದಾರೆ. ಶಾರುಖ್ ಖಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿದ್ದಾರೆ.