ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಟೀಚಿಂಗ್ ಫೀಲ್ಡ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಇದೇ ಜನವರಿ 13ಕ್ಕೆ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಅಂದು ಬೆಳಗ್ಗೆ 11 ಗಂಟೆಗೆ ಇಂಟರ್ವ್ಯೂನಲ್ಲಿ ಪಾಲ್ಗೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಒಟ್ಟು 2 ಹುದ್ದೆಗಳು ಖಾಲಿ ಇವೆ.
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಎಚ್.ಡಿ ಸ್ಟ್ಯಾಟಿಸ್ಟಿಕ್ಸ್ ಪೂರ್ಣಗೊಳಿಸಿರಬೇಕು. (NET ಪಾಸಾಗಿರಬೇಕು)
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 45,000 ಸಂಬಳ ಕೊಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಜನವರಿ 13ರಂದು ಬೆಳಗ್ಗೆ 11 ಗಂಟೆಗೆ ಈ ಕೆಳಕಂಡ ವಿಳಾಸದಲ್ಲಿ ಹಾಜರಿರಬೇಕು.
ಡೀನ್(ಕೃಷಿ) ರವರ ಕಚೇರಿ.
ಕೃಷಿ ಮಹಾವಿದ್ಯಾಲಯ
ಧಾರವಾಡ
ಅರ್ಜಿಯನ್ನು ಮುಂಚಿತವಾಗಿ ಕಳುಹಿಸುವಂತಿಲ್ಲ. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು. ಈ ನೇಮಕಾತಿಯ ತಾತ್ಕಾಲಿಕವಾಗಿರುತ್ತದೆ.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 30/12/2022
ಸಂದರ್ಶನ ನಡೆಯುವ ದಿನಾಂಕ: 13/01/2023