“ಉಡ್ಡಿಯಾನ’ವೆಂದರೆ ಪಕ್ಷಿಯಂತೆ ಮೇಲೆ ಹಾರುವುದು. (ಪ್ರಡೀನೋಡ್ತೀನ ಸಂಡೀನಾತ್ಯೇತಾಃ ಖಗಗತಿಕ್ರಿಯಾಃ ।। ಎಂಬುದು ಪಕ್ಷಿಗಳ ವಿವಿಧ ಹಾರುವಿಕೆಯ ಭಂಗಿಯನ್ನು ವಿವರಿಸುವ ಅಮರಸಿಂಹನ ವಾಕ್ಯ.) ನಿಜವಾಗಿ ನೋಡಿದರೆ ಇದು ಆಸನವಲ್ಲ, ಆದರೆ ಇದು ಒಂದು ಬಂಧ ಕಟ್ಟು ಅಥವಾ ತಡೆ ವಿದ್ಯುತವಾಹವನ್ನು ಕ್ರಮವಾದ ಹತೋಟಿಯಲ್ಲಿಇರು ಅದಕ್ಕೆ ಬೇಕಾದ ಸಲಕರಣೆಗಳನ್ನು (Condensers, Puses and Switchen) ಹೀಗೆ ಬಳಸುವವೋ ಅದರಂತೆಯೇ ವಿವಿಧ ಬಂಧಗಳು ಪ್ರಾಣ (ಚೈತನ್ಯ) ಪ್ರವಾಹದ ಮೇಲೆ ಹತೋಟಿಯಿಟ್ಟುಕೊಂಡಿರುತ್ತವೆ. ಈ ಬಂಧದಲ್ಲಿ ಪ್ರಾಣಶಕ್ತಿಯು ಮುಂಡದ ಕೆಳಭಾಗದಲ್ಲಿರುವ ಕಿಬ್ಬೊಟ್ಟೆಯ ಕಡೆಯಿಂದ ತಲೆಯ ದಿಕ್ಕಿಗೆ ಹರಿಯುತ್ತದೆ. ಬಂಧ ಮತ್ತು ಪ್ರಾಣ – ಇವುಗಳ ವಿಷಯದಲ್ಲಿ ಹೆಚ್ಚಿನ ವಿವರಣೆಯನ್ನು ಈ ಗ್ರಂಥದ ಮೂರನೆಯ (III) ಭಾಗವಾದ ‘ಪ್ರಾಣಾಯಾಮ’ದಲ್ಲಿ ನೋಡಬಹುದು.
ಅಭ್ಯಾಸಕ್ರಮ
೧. ಮೊದಲು, ‘ತಾಡಾಸನ ಭಂಗಿಯಲ್ಲಿನಿಲ್ಲಬೇಕು.
೨. ಬಳಿಕ, ಕಾಲುಗಳನ್ನು ಒಂದಡಿ ಅಂತರವಿರುವಂತೆ ಅಗಲಿಸಬೇಕು.
೩. ಆಮೇಲೆ ಸ್ವಲ್ಪ ಮುಂಬಾಗಿ ಮಂಡಿಗಳನ್ನು ತುಸು ಬಾಗಿಸಿ, ಬೆರಳುಗಳನ್ನು ಚೆನ್ನಾಗಿ ಅಗಲಿಸಿದ ಕೈಗಳನ್ನು ತೊಡೆಯ ನಡುತಾಣದಲ್ಲಿ ಒತ್ತಿಡಬೇಕು.
೪. ಕೈಗಳನ್ನು ಕೆಳಗಿಳಿಸಿ, ಎದೆಯ ಮೇಲ್ಬಾಗದಲ್ಲಿ ಮತ್ತು ಕತ್ತಿನ ಕೆಳಗಡೆ ಇರುವ ಎಲುಬುಗಳ (Collar bones) ಮಧ್ಯದಲ್ಲಿರುವ ನಿಮ್ಮಸ್ಥಾನದಲ್ಲಿ ಗದ್ದವನ್ನು ಊರಿಡಬೇಕು.
೫. ಆನಂತರ, ನೀಳವಾಗಿ ಉಸಿರನ್ನು ಒಳಕ್ಕೆಳೆದು. ಒಡನೆಯೇ ವೇಗವಾಗಿ ಅಂದರೆ ಒಂದೇ ಸಾರಿ ಒಳಗಿರುವ ವಾಯುವೆಲ್ಲವನ್ನೂ ನಿಃಶ್ವಾಸ ರೀತಿಯಲ್ಲಿ ಮೂಗಿನ ಹೊಳ್ಳೆಗಳ ಮೂಲಕ ನಿಳವಾಗಿ ಹೊರಬಿಡಬೇಕು.
೬. ಆಮೇಲೆ, ಉಸಿರನ್ನು ಒಳಕ್ಕೆಳೆಯದೆ ಹಾಗೆಯೇ ನಿಂತು, ಕಿಬ್ಬೊಟ್ಟೆಯ ಭಾಗವನ್ನೆಲ್ಲ ಚೆನ್ನಾಗಿ ಆಕಳಿಸಿ ಬೆನ್ನಡೆಗೆ ಸೆಳೆದು, ಕಿಬ್ಬೊಟ್ಟೆಯನ್ನು ಕುಗ್ಗಿಸಿ (ಸಂಕುಚಿಸಿ) ಅದನ್ನು ಎದೆಯೆಲುಬಿನ ಕಡೆಗೆ ಮೇಲೆಳೆದು, ಕೈಗಳನ್ನು ತೊಡೆಗಳ ಮೇಲಿಂದ ಒತ್ತಿಡಬೇಕು. (ಚಿತ್ರ 593).
೭. ಅನಂತರ, ಬಿಗಿಹಿಡಿತದಲ್ಲಿಟ್ಟಿರುವಂತೆಯೇ ತೊಡೆಗಳ ಮೇಲಿಂದ ಕೈಗಳನ್ನು ಮೇಲೆತ್ತಿ, ಅವುಗಳನ್ನು ಟೊಂಕಗಳ ಮೇಲಿರಿಸಬೇಕು.
೮. ತರುವಾಯ ಎರಡು ಕಾಲುಗಳನ್ನೂ ಮತ್ತು ಬೆನ್ನನ್ನೂ ನೇರಗೊಳಿಸಿ (ನೆಟ್ಟಗೆ ಮಾಡಿ). ಕಿಬ್ಬೊಟ್ಟೆಯ ಮೇಲಣ ಬಿಗಿತವನ್ನು ಸಡಿಲಿಸದಂತೆಯೂ ಮತ್ತು ಗದ್ದವನ್ನು ಎದೆ ಎಲುಬಿನ ಸ್ಥಾನದಿಂದ ಕದಲದಂತೆಯೂ ನಿಲ್ಲಬೇಕು.
೯. ಆಮೇಲೆ ಕಿಬ್ಬೊಟ್ಟೆಯ ಮಾಂಸಖಂಡಗಳ ಮೇಲಣ ಬಿಗಿತವನ್ನು ಸಡಿಲಿಸಬೇಕು.
ಆದರೆ ಆಗ ಗದ್ದ ಮತ್ತು ತಲೆಯನ್ನು ಚಲಿಸದಂತಿಟ್ಟರಬೇಕು ಏಕೆಂದರೆ ತಲೆಯನ್ನು ಸರಿಸಿತೆಂದರೆ ಹೃದಯಸ್ಥಾನದ ಮೇಲೆ ಒತ್ತಡವುಂಟಾಗುವ ಸಂಭವವುಂಟು.
೧೦ ಬಳಿಕ ಉಸಿರಾಟವನ್ನು ನಿಧಾನವಾಗಿಯೂ ಆಳವಾಗಿಯೂ ನಡೆಸಬೇಕು.
೧೧. ಮೇಲಿನ ಕ್ರಮದಲ್ಲಿಯ ೬ ರಿಂದ ೯ರ ಪರಿಚ್ಛೇದದವರೆಗಿನ ಭಂಗಿಯಲ್ಲಿದ್ದಾಗ ಉಸಿರನ್ನು ಒಳಕ್ಕೆಳೆಯಬಾರದು. ಅಲ್ಲದೆ. ಅಭ್ಯಾಸಿಯು ತನ್ನ ಶಕ್ತಿಗನುಗುಣವಾಗಿ 5 ರಿಂದ 10 ಸೆಕೆಂಡುಗಳ ಕಾಲಕ್ಕಿಂತಲೂ ಹೆಚ್ಚಾಗಿ ಈ ಭಂಗಿಯಲ್ಲಿ ನಿಲ್ಲಬಾರದು.
೧೨. ಈಗ ಕೆಲವು ಸಲ ಉಸಿರಾಟ ನಡೆಸಿ, ಮೇಲಿನ ಅಭ್ಯಾಸಚಕ್ರದಲ್ಲಿ ೧ ರಿಂದ ೧೦ನೇ ಪರಿಚ್ಛೇದದವರೆವಿಗೂ ವಿವರಿಸಿರುವ ಭಂಗಿಯನ್ನು ಮತ್ತೆ ಮತ್ತೆ ಮಾಡಬೇಕು. (ಪುನರಾವರ್ತಿಸ ಬೇಕು), ಆದರೆ 24 ಗಂಟೆಗಳ ಕಾಲಾವಧಿಯಲ್ಲಿ ಪ್ರತಿಸಾರಿ ೬ ರಿಂದ ೮ ಸಲಕ್ಕಿಂತಲೂ ಹೆಚ್ಚಾಗಿ ಎಡೆಬಿಡದ ಅಭ್ಯಸಿಸಬಾರದು ಈ ಭಂಗಿಯಲ್ಲಿ ನಿಲ್ಲುವ ಕಾಲ ಮತ್ತು ಎಷ್ಟು ಸಲ ಪುನರಾವರ್ತಿಸ ಬೇಕೆಂಬುವನ್ನು ಈ ಭಂಗಿಯಲ್ಲಿ ಚೆನ್ನಾಗಿ ಪರಿಶ್ರಮಹೊಂದಿನ ಗುರುವಿನ ಸಮಕ್ಷಮದಲ್ಲಿಯೇ ಅಭ್ಯಸಿಸಬೇಕು.
೧೩. ಈ ಅಭ್ಯಾಸಕ್ರಮದ ಚಕ್ರವನ್ನು ದಿನಕ್ಕೆ ಒಂದೇ ಬಾರಿ ಮಾತ್ರ ಎಡೆಬಿಡದೆ ಆಚರಿಸಬೇಕು.
14. ಈ ಅಭ್ಯಾಸವನ್ನು ಮಲಮೂತ್ರಗಳನ್ನು ವಿಸರ್ಜಿಸಿದ ಮೇಲೆ ಹೊಟ್ಟೆಯಲ್ಲಿರುವಾಗ ಕೈಗೊಳ್ಳಬೇಕು.
೧೫. ಮೊದಲು, ನಿಲ್ಲುವ ಭಂಗಿಯಲ್ಲಿ ‘ಉಡ್ಡಿಯಾನ ಬಂಧವನ್ನು ಅಭ್ಯಸಿಸಿ, ಬಳಿಕ ಕುಳಿತುಕೊಂಡು ಇದನ್ನು ಅಭ್ಯಸಿಸಬೇಕಾಗಿದೆ. ಇದು ಪ್ರಾಣಾಯಾಮಾಭ್ಯಾಸದ ಹಿನ್ನೆಲೆಗೆ ಮೊದಲನೆಯ ಹಂತ
೧೬.ಈ ಮುಂದಿನ ಮೂರನೇ ಭಾಗದಲ್ಲಿ ವಿವರಿಸಿರುವ ವಿವಿಧ ಪ್ರಾಣಾಯಾಮದ ಕ್ರಮವನ್ನು ಅಭ್ಯಸಿಸುವಾಗ ಈ ಉಡ್ಡಿಯಾನಬಂಧವನ್ನು ಉಸಿರನ್ನು ಒಳಗಿನಿಂದ ಹೊರಬಿಡು ವಾಗಲೂ (ರೇಚಕ) ಮತ್ತು ಉಸಿರನ್ನು ಒಳಗೇ ನಿಲ್ಲಿಸಿರುವಾಗಲೂ (ಕುಂಭಕ) ಅಭ್ಯಸಿಸ ಬೇಕಾಗಿದೆ.
ಪರಿಣಾಮಗಳು
ಈ ಬಂಧವು ಕಿಬ್ಬೊಟ್ಟೆಯೊಳಗಿನ ಅಂಗಗಳ ವ್ಯಾಪಾರಗಳನ್ನು ಕ್ರಮಪಡಿಸುತ್ತದೆ. ಜಠರಾಗ್ನಿಯನ್ನು ಹೆಚ್ಚಿಸುತ್ತದೆ. ಮತ್ತು ಜೀರ್ಣಾಂಗಗಳ ಪಥದಲ್ಲಿ ವಿಷಜೀವಾಣುಗಳ ಉತ್ಪತ್ತಿಗೆ ತಡೆ ತರುತ್ತದೆ.