ಮನೆ ರಾಜ್ಯ ಉಡುಪಿ:  ಮಲ್ಪೆ ಬೀಚ್ ​ಗೆ ಪ್ರವಾಸಿಗರಿಗೆ ನಿಷೇಧ

ಉಡುಪಿ:  ಮಲ್ಪೆ ಬೀಚ್ ​ಗೆ ಪ್ರವಾಸಿಗರಿಗೆ ನಿಷೇಧ

0

ಉಡುಪಿ:  ಕಡಲು ತೀರ ಉಡುಪಿ ಜಿಲ್ಲೆಯಲ್ಲಿ ಬಿಟ್ಟು, ಬಿಡದೆ ವರುಣ ಆರ್ಭಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜಿಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್ ​ಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

Join Our Whatsapp Group

ಮಲ್ಪೆ ಬೀಚ್​ಗೆ ಬೇಲಿ ಹಾಕಿ, ಬೀಚ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಅಲ್ಲದೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅನೇಕ ಕ್ರಮಗಳನ್ನು ಕೈಗೊಂಡಿದೆ.

ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ತಡೆ ಬೇಲಿಯನ್ನು ಸದ್ಯಕ್ಕೆ ನಿರ್ಮಿಸಲಾಗಿದೆ. ಜೊತೆಗೆ ಎಚ್ಚರಿಕೆಯ ಕೆಂಪು ಬಾವುಟ ಹಾಕಲಾಗಿದೆ. ಇದರ ಜೊತೆಗೆ ಆಯಕಟ್ಟಿನ ಜಾಗದಲ್ಲಿ ಬೀಚ್ ಪ್ರವೇಶ ನಿಷೇಧದ ಎಚ್ಚರಿಕೆ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಮಲ್ಪೆ ಬೀಚಿನಲ್ಲಿ ತರಬೇತಿ ಪಡೆದ ಜೀವ ರಕ್ಷಕರನ್ನ ನಿಯೋಜನೆ ಮಾಡಲಾಗಿದೆ. ನಿರಂತರವಾಗಿ ಎಟಿಬಿ ಸ್ಯಾಂಡ್ ಬೈಕ್ ಮೂಲಕ ಬೀಚ್​​ನ್ನು ಗಸ್ತು ತಿರುಗುವ ಜೀವ ರಕ್ಷಕ ಪಡೆಯ ಸದಸ್ಯರು ಬೀಚ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆಗಳನ್ನ ನೀಡುತ್ತಾ, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದ್ರ ಪ್ರಸಿದ್ಧಿ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಬಲೆಯನ್ನು ದಾಟಿ ಹೋಗದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಜಿಲ್ಲಾಡಳಿತ ನೀಡಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸಿದ್ದಾರೆ. ಹಲವಾರು ನಿರ್ಬಂಧಗಳು ಮತ್ತು ಸಲಹೆಗಳ ಹೊರತಾಗಿಯೂ, ಅನೇಕ ಪ್ರವಾಸಿಗರು ಜೀವರಕ್ಷಕರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಕಡಲತೀರದ ದಕ್ಷಿಣ ಭಾಗದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.