ಮನೆ ರಾಜ್ಯ ಉದ್ಯಾನ್​​ ಎಕ್ಸ್​ ಪ್ರೆಸ್​​​​ ರೈಲಿನಲ್ಲಿ ಅಗ್ನಿ ಅವಘಡ: ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ

ಉದ್ಯಾನ್​​ ಎಕ್ಸ್​ ಪ್ರೆಸ್​​​​ ರೈಲಿನಲ್ಲಿ ಅಗ್ನಿ ಅವಘಡ: ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ

0

ಬೆಂಗಳೂರು: ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್​​ ಎಕ್ಸ್​ ಪ್ರೆಸ್​​​​ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಆವರಿಸಿದ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ.

ಶನಿವಾರ ಬೆಳಿಗ್ಗೆ ಪ್ರಯಾಣಿಕರನ್ನು ಹೊತ್ತ ರೈಲು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬಂದು ನಿಂತು ಸುಮಾರು ಎರಡು ಗಂಟೆಗಳ ಬಳಿಕ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಕೂಡಲೇ ಎಚ್ಚೆತ್ತ ಪ್ರಯಾಣಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.

ಮೊದಲಿಗೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಪಕ್ಕದ ಎರಡು ಬೋಗಿಗಳಿಗೆ ಆವರಿಸಿಕೊಂಡಿದೆ ಎನ್ನಲಾಗಿದೆ.

ತಾಂತ್ರಿಕ ಸಮಸ್ಯೆಯಿಂದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನ2 ಲಕ್ಷ ರೂ.ಗೆ ಬಾಲಕಿ ಖರೀದಿಸಿ ವೇಶ್ಯಾವೃತ್ತಿಗೆ ಬಳಕೆ: ಅಪ್ರಾಪ್ತೆಯನ್ನು ರಕ್ಷಿಸಿದ ಒಡನಾಡಿ ಸೇವಾ ಸಂಸ್ಥೆ
ಮುಂದಿನ ಲೇಖನಯಾವ ಶಾಸಕರೂ ಕಾಂಗ್ರೆಸ್’ಗೆ ಹೋಗಲ್ಲ: ಮಾಜಿ ಸಚಿವ ಆರಗ ಜ್ಞಾನೇಂದ್ರ