ಹೊಸ ವರ್ಷದ ಆರಂಭದ ಸಂಕೇತವಾಗಿ ಯುಗಾದಿ ಹಬ್ಬ ಬರುತ್ತಿದೆ. ಹಬ್ಬದ ತಯಾರಿಗೆ ಈಗಾಗಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಬೇವು ಬೆಲ್ಲ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿ :-
- ಹುರಿಗಡಲೆ- 2 ಚಮಚ
- ಬೆಲ್ಲ- 1 ಚಮಚ
- ಒಣ ಕೊಬ್ಬರಿ ತುರಿ- 2 ಚಮಚ
- ಬೇವಿನ ಹೂವಿನ ದಳಗಳು -ಸ್ವಲ್ಪ
ಮಾಡುವ ವಿಧಾನ :-
- ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
- ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
- ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
- ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.
- ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
- ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ.















