ದೊಡ್ಡಬಳ್ಳಾಪುರ(Doddaballapura): ಗೀತಂ ವಿಶ್ವ ವಿದ್ಯಾಲಯದಲ್ಲಿ(Geetham University) ವ್ಯಾಸಂಗ ಮಾಡುತ್ತಿದ್ದ ಉಗಾಂಡ ದೇಶದ ವಿದ್ಯಾರ್ಥಿನಿ ಅಸೀನ ಅಗಷ(24) ಬುಧವಾರ ರಾತ್ರಿ ಹಾಸ್ಟೆಲ್‌ನ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾಲೇಜಿನ ಕಚೇರಿ, ಕ್ಯಾಂಟೀನ್ ಕಿಟಕಿಗಳ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಡಿವೈಎಸ್ಪಿ ನಾಗರಾಜ್, ಇನ್‌ಸ್ಪೆಕ್ಟರ್ ಸತೀಶ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿದ್ಯಾರ್ಥಿನಿ ಮೃತ ದೇಹವನ್ನು ನಗರದ ಸರ್ಕಾರಿ ಶವಾಗಾರದಲ್ಲಿ ಇರಿಸಲಾಗಿದೆ.