ಮನೆ ಯೋಗಾಸನ ಉಗ್ರಾಸನ

ಉಗ್ರಾಸನ

0

ಉಗ್ರಾಸನಕ್ಕೆ “ವಿಸ್ತೃತ ಪಾದ ವಕ್ಷ ಭೂ ಸ್ಪರ್ಶಾಸನ” ಎಂಬ ಹೆಸರೂ ಇದೆ. ಈ ಆಸನದ ಹೆಸರಿನಂತೆಯೇ ಅಭ್ಯಾಸವೂ ಕಠಿಣ.

Join Our Whatsapp Group

ಮಾಡುವ ಕ್ರಮ:

1)    ಪ್ರಾರಂಭದಲ್ಲಿ ಯೋಗಾಭ್ಯಾಸಿಯು ತನ್ನ ಎರಡೂ ಕಾಲುಗಳನ್ನು ನೇರವಾಗಿ ಮುಂದಕ್ಕೆ ಚಾಚಿ, ಎದೆಯೆತ್ತಿ ನೆಟ್ಟಗೆ ಕುಳಿತುಕೊಳ್ಳಬೇಕು.

2)   ಅನಂತರ ಎರಡೂ ಕಾಲುಗಳನ್ನು ಅಗಲಿಸುತ್ತಾ ಅವು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರುವಂತೆ ಚಾಚಬೇಕು. ಆಗ ಕಾಲುಗಳ ನಡುವಿನ ಕೋನವು 180 ಇರಬೇಕು.

3) ಅನಂತರ ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೇ ನಿಧಾನವಾಗಿ ಕೈಗಳನ್ನು ಮುಂದಕ್ಕೆ ಚಾಚಬೇಕು. ಹಾಗೆಯೇ ಕೈಗಳನ್ನು ಚಾಚುತ್ತಾ ನಿಧಾನವಾಗಿ ಎದೆಯನ್ನು ನೆಲಕ್ಕೆ ಮುಟ್ಟಿಸಲು ಪ್ರಯತ್ನಿಸಬೇಕು. ಎದೆಯನ್ನು ನೆಲಕ್ಕೆ ಮುಟ್ಟಿಸಲು ಪ್ರಯತ್ನಿಸಿದಾಗ ಮಾತ್ರ ಬೆನ್ನಿನ ಗೂನು ದೂರವಾಗುವುದು. ಈ ಸ್ಥಿತಿ ತಲುಪಲು ಬಹಳ ದಿನ ಬೇಕಾಗುವುದು. ಒಂದೇ ದಿನದಲ್ಲಿ ಸಾಧಿಸುವ ಪ್ರಯತ್ನ ಮಾಡಿದಲ್ಲಿ ಶರೀರಕ್ಕೆ ತುಂಬಾ ಆಯಾಸವಾಗುವುದು.

ಲಾಭಗಳು:

ಉಗ್ರಾಸನದ ಅಭ್ಯಾಸದಿಂದ ಕಾಲುಗಳಿಗೆ ವಿಶೇಷವಾದ ಬಲ ಬರುವುದು. ಬೆನ್ನು ನೇರವಾಗುವುದು. ಕಾಲುಗಳ ಮೀನಖಂಡಗಳು ಮತ್ತು ಕೀಲುಗಳಲ್ಲಿನ ಅನೇಕ ದೋಷಗಳು ದೂರವಾಗುವವು.