ಮನೆ ಅಪರಾಧ ಉಳ್ಳಾಲ: ಗ್ಯಾಸ್‌ ಟ್ಯಾಂಕರ್‌ ನಿಂದ ಆಸಿಡ್‌ ಸೋರಿಕೆ

ಉಳ್ಳಾಲ: ಗ್ಯಾಸ್‌ ಟ್ಯಾಂಕರ್‌ ನಿಂದ ಆಸಿಡ್‌ ಸೋರಿಕೆ

0

ಉಳ್ಳಾಲ (ದಕ್ಷಿಣ ಕನ್ನಡ):ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರ್ ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ  ಅನಿಲ ಟ್ಯಾಂಕರಿನಿಂದ ಆಸಿಡ್‌ ಸೋರಿಕೆ ಆರಂಭವಾಗಿದ್ದು, ಸ್ಥಳದಲ್ಲಿ  ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್‌ ಪಿಎಲ್‌ ತಂಡ ಮತ್ತು  ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Join Our Whatsapp Group

ಕಾರವಾರದಿಂದ ಕೊಚ್ಚಿಗೆ  ಆಸಿಡ್‌ ಕೊಂಡೊಯ್ಯುವ ಟ್ಯಾಂಕರಿನಲ್ಲಿ ಈ ಸೋರಿಕೆ ಉಂಟಾಗಿದೆ.  ಇದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ.  ತಕ್ಷಣ  ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಅಪಾಯವಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.