ಮನೆ ರಾಜ್ಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಅಂತ್ಯಸಂಸ್ಕಾರ

ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಅಂತ್ಯಸಂಸ್ಕಾರ

0

ಬೆಂಗಳೂರು(Bengaluru) : ಹೃದಯಾಘಾತದಿಂದ ನಿಧನರಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದಬಾಗೇವಾಡಿಯಲ್ಲಿ ತೋಟದಲ್ಲಿ ತಂದೆ ವಿಶ್ವನಾಥ್ ಕತ್ತಿ, ತಾಯಿ ರಾಜೇಶ್ವರಿ ಅವರ ಸಮಾ ಪಕ್ಕದಲ್ಲೇ ಮಹಾಂತೇಶ್ವರ ವಿರಕ್ತ ಮಠದ ಶಿವಾನಂದ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು.
ಉಮೇಶ್ ಕತ್ತಿ ಅವರ ಪುತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.