ಮನೆ ಅಪರಾಧ ಚಿಕ್ಕಬಳ್ಳಾಪುರದಲ್ಲಿ ಕೇವಲ ಮೊಬೈಲ್ ವಿಚಾರಕ್ಕೆ ಚಿಕ್ಕಪ್ಪನಿಂದ ಅಣ್ಣನ ಮಗನ ಹತ್ಯೆ!

ಚಿಕ್ಕಬಳ್ಳಾಪುರದಲ್ಲಿ ಕೇವಲ ಮೊಬೈಲ್ ವಿಚಾರಕ್ಕೆ ಚಿಕ್ಕಪ್ಪನಿಂದ ಅಣ್ಣನ ಮಗನ ಹತ್ಯೆ!

0

ಚಿಕ್ಕಬಳ್ಳಾಪುರ: ಕೇವಲ ಮೊಬೈಲ್ ಫೋನ್ ವಿಚಾರಕ್ಕೆ ಉಂಟಾದ ಜಗಳವು ಕೊಲೆಯಯಲ್ಲಿ ಅಂತ್ಯವಾಗಿದೆ. ಚಿಕ್ಕಪ್ಪನೊಬ್ಬನು ತನ್ನ ಅಣ್ಣನ ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಬಟ್ಲಹಳ್ಳಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಸುನಿಲ್ (29) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಚಿಕ್ಕಪ್ಪ ರಮೇಶ್, ತನ್ನ ಮೊಬೈಲ್‌ನ್ನು ಸುನಿಲ್ ತೆಗೆದುಕೊಂಡಿದ್ದು ಮರಳಿ ನೀಡದೆ ಇರೋದಕ್ಕೆ ಕೋಪಗೊಂಡಿದ್ದ. ಈ ಹಿನ್ನೆಲೆ ಜೂನ್ 8, ಭಾನುವಾರದಂದು ಅವರಿಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.

ಅಲ್ಲದೇ, ರಾತ್ರಿ ಸುನಿಲ್ ಮಲಗಿದ್ದ ಸಂದರ್ಭದಲ್ಲಿ, ರಮೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದಾನೆ ಎಂಬ ಮಾಹಿತಿ ಬಂದಿದೆ. ತಕ್ಷಣವೇ ಗಂಭೀರ ಗಾಯಗೊಂಡ ಸುನಿಲ್‍ಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮ್ಹಾನ್ಸ್‌ಗೆ ಸೇರಿಸಲಾಗಿತ್ತು.

ಆದರೆ ಚಿಕಿತ್ಸೆಗೆ ಸ್ಪಂದಿಸದೆ, ಮಂಗಳವಾರ ಸುನಿಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇತ್ತ ಕೊಲೆ ಮಾಡಿದ ಆರೋಪಿ ರಮೇಶ್ ಪರಾರಿಯಾಗಿದ್ದಾನೆ. ಪ್ರಕರಣವನ್ನು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿಸಿದ್ದು, ಪೊಲೀಸರಿಂದ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.