ಮನೆ ರಾಷ್ಟ್ರೀಯ ಧಾರವಾಡ ಸೇರಿ ದೇಶದ 5 ‘ಐಐಟಿ’ಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು!

ಧಾರವಾಡ ಸೇರಿ ದೇಶದ 5 ‘ಐಐಟಿ’ಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು!

0

ನವದೆಹಲಿ : ದೇಶದ ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಬಿಗ್ ಬೂಸ್ಟ್ ನೀಡಲಾಗಿದೆ. ಧಾರವಾಡ ಸೇರಿ ಐದು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರದಿಂದ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಅವಕಾಶ ಸಿಗಲಿದೆ.

ಈ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಮ್ಮತಿ ದೊರೆತಿದೆ” ಎಂದು ಅವರು ತಿಳಿಸಿದರು.

ವಿಸ್ತರಣೆಗೆ ಒಳಪಡುವ ಐಐಟಿ ಗಳು: ಧಾರವಾಡ (ಕರ್ನಾಟಕ), ತಿರುಪತಿ (ಆಂಧ್ರಪ್ರದೇಶ), ಭಿಲಾಯಿ (ಛತ್ತೀಸ್‌ಗಢ), ಜಮ್ಮು (ಜಮ್ಮು ಮತ್ತು ಕಾಶ್ಮೀರ) ಮತ್ತು ಪಾಲಕ್ಕಾಡ್ (ಕೇರಳ). ಈ ಐಐಟಿಗಳಲ್ಲಿ ಶೈಕ್ಷಣಿಕ ಸೌಲಭ್ಯ ಹಾಗೂ ಮೂಲಸೌಕರ್ಯ ವಿಸ್ತರಣೆಗೊಳ್ಳಲಿದೆ. ಈ ವ್ಯಾಪ್ತಿಯ ಯೋಜನೆಯಡಿಯಲ್ಲಿ, ಹೊಸ ಸಂಶೋಧನಾ ಪಾರ್ಕ್‌ಗಳ ಸ್ಥಾಪನೆ, 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ. ಹಾಗೂ 130 ಹೊಸ ಅಧ್ಯಾಪಕರ ಹುದ್ದೆಗಳ ರಚನೆ ಕೂಡ ನಡೆಯಲಿದೆ. ಇದರಿಂದ ಶಿಕ್ಷಣ ಗುಣಮಟ್ಟ ಹೆಚ್ಚಾಗಲಿದ್ದು, ಉದ್ಯೋಗಾವಕಾಶಗಳು ಮತ್ತು ಸಂಶೋಧನೆಗೆ ಉತ್ತೇಜನ ಸಿಗಲಿದೆ.

ಈ ಯೋಜನೆಯ ಪರಿಣಾಮವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ, ಹೆಚ್ಚು ಪ್ರವೇಶ ಅವಕಾಶಗಳು ಮತ್ತು ಉತ್ತಮ ಅಧ್ಯಾಪನ ವ್ಯವಸ್ಥೆ ಲಭಿಸಲಿದೆ. ಅದಲ್ಲದೆ, ಹೊಸ ಅಧ್ಯಾಪಕರ ನೇಮಕದಿಂದ ಉದ್ಯೋಗದ ಅವಕಾಶಗಳೂ ಹೆಚ್ಚಾಗಲಿವೆ. ಇವುಗಳ ಸಮಗ್ರ ಪರಿಣಾಮದಿಂದ ದೇಶದ ಆರ್ಥಿಕ ಹಾಗೂ ತಾಂತ್ರಿಕ ಬೆಳವಣಿಗೆಗೆ ಬಲವಾಗಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.