ಮನೆ ರಾಜ್ಯ ರಾಯಚೂರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್

ರಾಯಚೂರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್

0

ರಾಯಚೂರು(Raichuru):  ಕೃಷಿ ವಿಜ್ಞಾನಗಳ‌ ವಿಶ್ವವಿದ್ಯಾಲಯವು ನಬಾರ್ಡ್ ಸಹಯೋಗದಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಭಿಯಾನವನ್ನು ಉದ್ಘಾಟಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್‌ ಅವರು ಶನಿವಾರ ಆಗಮಿಸಿದರು.

ಕುರ್ಲಾ- ಕೊಯಿಮುತ್ತೂರ್ ರೈಲಿನ ಮೂಲಕ ಆಗಮಿಸಿದ ಅವರನ್ನು ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ ಹಾಗೂ ಕೃಷಿ ವಿವಿ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಸ್ವಾಗತಿಸಿದರು.

ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮಧ್ಯಾಹ್ನ ಪಾಲ್ಗೊಳ್ಳಲಿದ್ದು, ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಿರಿಧಾನ್ಯಗಳ ಕುರಿತು ಸಂವಾದ ನಡೆಸುವರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದಿನ ಲೇಖನಲೈಂಗಿಕ ಕಿರುಕುಳ ಆರೋಪ: ಮುರುಘಾ ಶರಣರ  ವಿರುದ್ಧ ಫೋಕ್ಸೋ ಕಾಯ್ದೆಯಡಿ ದೂರು ದಾಖಲು
ಮುಂದಿನ ಲೇಖನಸೋನಾಲಿ ಪೋಗಾಟ್ ಸಾವು: ರೆಸ್ಟೊರೆಂಟ್ ಮಾಲೀಕ, ಶಂಕಿತ ಡ್ರಗ್ ಸಾಗಣೆದಾರ ಬಂಧನ