ಮಡಿಕೇರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ಅರ್ಧಕ್ಕೆ ಮೊಟಕುಗೊಂಡಿತು.
ಚೌಡೇಶ್ವರಿ ದೇವಾಲಯದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಬೆಳಿಗ್ಗೆ 10.30 ಕ್ಕೆ ನಿಗದಿಯಾಯಿತು. ಆದರೆ ಅಮಿತ್ ಶಾ ಮಧ್ಯಾಹ್ನ 12.36 ಕ್ಕೆ ರೋಡ್ ಶೋ ಆರಂಭಿಸಿದರು.
ಚೌಕಿಯನ್ನು ದಾಟಿ ಸ್ಕ್ಯಾಡನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ವೃತ್ತಕ್ಕೆ ಮಧ್ಯಾಹ್ನ 1.20 ಕ್ಕೆ ಬರುತ್ತಿದ್ದಂತೆ ರೋಡ್ ಶೋ ಅನ್ನು ಮೊಟಕುಗೊಳಿಸಿದರು.
ತೆರೆದ ವಾಹನದಿಂದ ಇಳಿದ ಅವರು ಕಾರ್ಯಕರ್ತರತ್ತ ಕೈಬೀಸಿ ತಮ್ಮ ಕಾರನ್ನೇರಿ ಹೊರಟರು. ಸುಮಾರು 3 ಸಾವಿರ ಮಂದಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ನಡೆಸಿದ ರೋಡ್ ಶೋನಲ್ಲಿ ಸಾವಿರಾರು ಮಂದಿ ಭಾಗಿಯಾದರು.
ಮಹದೇವಪೇಟೆಯ ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಯತ್ತ ಕೈಬೀಸಿದರು.
ಕೇಸರಿ ಬಾವುಟಗಳು ಹಾಗೂ ಬಿಜೆಪಿ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.














