ಸ್ವರ್ಗೇಶುಚಿಪೌಷ್ಟಪದೇಶಮಾಘೇಭೂಮೌ ನಭಃಕಾರ್ತಿಚೈತ್ರಪೌಷೇ|
ಮೂಲಂಹ್ಯದಸ್ತತಾತು ತಪಸ್ಯಮಾರ್ಗ ವೈಶಾಖಶುಕ್ರೇಷ್ಟಶುಭಂಚ ತತ್ರ||
ಆಷಾಢ, ಭಾದ್ರಪದ,ಅಶ್ವಿನಿ, ಮಾಘ, ಈ ಮಾಸಗಳಲ್ಲಿ ಮೂಲಾ ನಕ್ಷತ್ರ ಸ್ವರ್ಗದಲ್ಲಿರುತ್ತದೆ.ಶ್ರಾವಣ, ಕಾರ್ತಿಕ,ಚೈತ್ರ, ಮತ್ತು ಪುಷ್ಯಗಳಲ್ಲಿ ಭೂಮಿಯ ಮೇಲೆ ಹಾಗೂ ಪಾಲ್ಗುಣ,ಆಗಹನ, ವೈಶಾಖ, ಜೇಷ್ಠಗಳಲ್ಲಿ ಪಾತಾಳದಲ್ಲಿ ಮೂಲಾ ನಕ್ಷತ್ರ ವಾಸಮಾಡುತ್ತದೆ. ಮೂಲಾ ನಕ್ಷತ್ರ ಎಲ್ಲಿರುತ್ತದೋ, ಅಲ್ಲಿಯೇ ಅಶುಭ ಫಲ ನೀಡುತ್ತದೆ.
ಸಂತಾನೋತ್ಪತ್ತಿಯಲ್ಲಿ ಅಶುಭ ಕಾಲ :
ಗಂಡಾಂತೇಂದ್ರಭಶೂಲಪಾತ ಪರಿಘವ್ಯಾಘಾತಗಂಡಾವಮೇ ಸಾಂಕ್ರಾಂತಿವ್ಯತಿಪಾತ ವೈಧೃತಿಸಿನೀವಾಲೀಕುಹೂದರ್ಶಕೇ|
ವಜ್ರೆಕೃಷ್ಣಚತುರ್ದಶೀಷು ಯಮಘಂಟೇ ದಗ್ಧಯೋಗೇ ಮೃತೌ
ವಿಷ್ಟಾ ಸೋದರಭೇ ಜನಿರ್ನ ಪಿತೃಭೇ ಶಸ್ತಾ ಶುಭಾ ಶಾಂತಿತ||
ಗಂಡಾಂತ, ಜೇಷ್ಠಾ ನಕ್ಷತ್ರ,ಶೂಲ ಯೋಗ, ಪಾತ, ಪರಿಘಯೋಗ, ವ್ಯಾಘಾತಯೋಗ, ಗಂಡಯೋಗ, ಕ್ಷೇಯತಿಥಿ, ಸಂಕ್ರಾಂತಿ ವೃತಿಪಾತ ಯೋಗ,ವೈಧೃತಿಯೋಗ, ಸಿನೀವಾಲಿ, ಕೂಹೂ ವಜ್ರಯೋಗ, ಕೃಷ್ಣ ಪಕ್ಷದ ಚತುರ್ದಶಿ, ಯಮಘಂಟಯೋಗ ದಗ್ದಯೋಗ, ಭದ್ರಾ, ಸೋದರ ಜನ್ಮನಕ್ಷತ್ರ, ತಾಯಿತಂದೆಯ ಜನ್ಮ ನಕ್ಷತ್ರ ಇವುಗಳಲ್ಲಿ ಜನ್ಮವಾಗುವುದು ಅಶುಭವಾದುದು. ಶಾಂತಿ ಮಾಡುವುದರಿಂದ ಶುಭವಾಗುತ್ತದೆ.