ಮನೆ ಸ್ಥಳೀಯ ಬಿಜೆಪಿಯಲ್ಲಿರುವ ಒಗ್ಗಟ್ಟು, ಶಿಸ್ತು ಜೆಡಿಎಸ್ ಪಕ್ಷದಲ್ಲಿಲ್ಲ: ಜಿ ಟಿ ದೇವೇಗೌಡ

ಬಿಜೆಪಿಯಲ್ಲಿರುವ ಒಗ್ಗಟ್ಟು, ಶಿಸ್ತು ಜೆಡಿಎಸ್ ಪಕ್ಷದಲ್ಲಿಲ್ಲ: ಜಿ ಟಿ ದೇವೇಗೌಡ

0

ಮೈಸೂರು: ಬಿಜೆಪಿಯಲ್ಲಿರುವ ಒಗ್ಗಟ್ಟು, ಶಿಸ್ತು ಜೆಡಿಎಸ್ ಪಕ್ಷದಲ್ಲಿಲ್ಲ ಎಂದು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದ್ದಾರೆ.

Join Our Whatsapp Group

ಇಂದು ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೆ ವಿವೇಕಾನಂದ ಪರ ಮತ ಯಾಚಿಸುವಾಗ, ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಸಮ್ಮುಖದಲ್ಲೇ ತಮ್ಮ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದರು.

ಜೆಡಿಎಸ್ ಈಗ ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವುದರಿಂದ ಆ ಪಕ್ಷದಿಂದ ತಮ್ಮ ಪಕ್ಷದ ಸದಸ್ಯರು ಕಲಿಯುವುದು ಸಾಕಷ್ಟಿದೆ ಎಂದು ಹೇಳಿದ ಅವರು, ಯಾವುದೇ ಕಾರ್ಯಕ್ರಮದ ಆಯೋಜನೆಯಲ್ಲಿ ತಮ್ಮ ಪಕ್ಷದ ನಾಯಕರನ್ನು ಹೆಸರಿಡಿದು ಆಮಂತ್ರಿಸಬೇಕಾಗುತ್ತದೆ, ತಾವಾಗಿಯೇ ಅವರು ಬರೋದಿಲ್ಲ, ಆದರೆ ಬಿಜೆಪಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಸ್ಥಿತಿ ಇದೆ, ಅಲ್ಲಿ ಯಾವ ಮುಖಂಡನನ್ನೂ ಪ್ರತ್ಯೇಕವಾಗಿ ಆಹ್ವಾನಿಸಲ್ಲ, ಅವರಷ್ಟಕ್ಕೆ ಅವರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ-ಮೊದಲಾದವರೆಲ್ಲ ಜೊತೆಗೂಡಿರುವುದರಿಂದ ನಮ್ಮ ಒಗ್ಗಟ್ಟಿನ ಮುಂದೆ ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಗೆಲ್ಲಲಾರದು ಎಂದು ದೇವೇಗೌಡ ಹೇಳಿದರು.

ಹಿಂದಿನ ಲೇಖನಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಬರಹ ಬರೆದಿದ್ದ ಯುವಕನ ಬಂಧನ
ಮುಂದಿನ ಲೇಖನಮೇ 31ರಂದು ಕೇರಳ ಪ್ರವೇಶಿಸಲಿರುವ ನೈಋತ್ಯ ಮುಂಗಾರು