ಮನೆ ಮನರಂಜನೆ ಫೆ.7ರಂದು “ಅನ್‌ಲಾಕ್‌ ರಾಘವ’ ಚಿತ್ರ ಬಿಡುಗಡೆ

ಫೆ.7ರಂದು “ಅನ್‌ಲಾಕ್‌ ರಾಘವ’ ಚಿತ್ರ ಬಿಡುಗಡೆ

0

“ಲವ್‌ ಮಾಕ್ಟೇಲ್‌-2′ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಬೆಡಗಿ ರಚೆಲ್‌ ಡೇವಿಡ್‌ ಈಗ ರಾಘವನ ಕನಸು ಕಾಣುತ್ತಿದ್ದಾರೆ. ಅದು ಅಂತಿಂಥ ರಾಘವ ಅಲ್ಲ, ಅನ್‌ಲಾಕ್‌ ರಾಘವ.

Join Our Whatsapp Group

ರಚೆಲ್‌ ಡೇವಿಡ್‌ ನಾಯಕಿಯಾಗಿ ನಟಿಸಿರುವ “ಅನ್‌ಲಾಕ್‌ ರಾಘವ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಫೆ.7ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ರಚೆಲ್‌ ನಿರೀಕ್ಷೆ ಇಟ್ಟಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡುವ ರಚೆಲ್‌, “ದೀಪಕ್‌ ಅವರು ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಿರ್ಧರಿಸಿದ್ದೆ. ಅಷ್ಟು ಸುಂದರ ಕಥಾನಕವಿದು, ಇದರಲ್ಲಿ ನಟಿಸಬೇಕೆಂದು. ಚಿತ್ರದಲ್ಲಿ ನಾನು ಪ್ರಾಚ್ಯ ಶಾಸ್ತ್ರಗ್ನೆಯಾಗಿ ಕಾಣಿಸಿಕೊಂಡಿದ್ದೇನೆ. ಜಾನಕಿ ನನ್ನ ಪಾತ್ರದ ಹೆಸರು” ಎನ್ನುತ್ತಾರೆ. ಈ ಚಿತ್ರವನ್ನು ಮಂಜುನಾಥ್‌ ದಾಸೇಗೌಡ ಹಾಗೂ ಗಿರೀಶ್‌ ಕುಮಾರ್‌ ನಿರ್ಮಿಸಿದ್ದು, ದೀಪಕ್‌ ಮಧುವನಹಳ್ಳಿ ನಿರ್ದೇಶಿಸಿದ್ದಾರೆ. ಮಿಲಿಂದ್‌ ಈ ಚಿತ್ರದ ನಾಯಕ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದೀಪಕ್‌, “ನನ್ನ ಹಿಂದಿನ ಚಿತ್ರಗಳನ್ನು ನೋಡಿದ್ದ ನನ್ನ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್‌ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಅನ್‌ಲಾಕ್‌ ರಾಘವ ಚಿತ್ರದ ಫ‌ಸ್ಟ್‌ಲುಕ್‌ ನಲ್ಲಿ ರೆಚೆಲ್‌ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್‌ ಚಿತ್ರದ ನಿರ್ದೇಶಕ ಎಂದು ಹೇಳಿದರು. ಇನ್ನು, ನಾಯಕ ಮಿಲಿಂದ್‌ ಸ್ಟೈಲಿಶ್‌ ನಟ ಅಷ್ಟೇ ಅಲ್ಲ. ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ ಮನರಂಜನೆಯ ರಸದೌತಣ ನೀಡುವ, ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ. ರಾಮ ರಾಮ ರೆ ಖ್ಯಾತಿಯ ಸತ್ಯಪ್ರಕಾಶ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ’ ಎನ್ನುತ್ತಾರೆ.

ಸತ್ಯಪ್ರಕಾಶ್‌ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್‌ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್‌ ನಿರ್ದೇಶನ ಮಾಡಿದ್ದಾರೆ. ರೆಚೆಲ್‌ ಅವರ ಅಭಿನಯ ಅದ್ಭುತವಾಗಿದೆ. ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧುಕೋಕಿಲ ಹಾಗೂ ಶೋಭ್‌ ರಾಜ್‌ ಅವರನ್ನು ನಮ್ಮ ಚಿತ್ರದಲ್ಲಿ. ನೋಡಬಹುದು. ಇತ್ತೀಚೆಗೆ ಟೆಕ್ನಿಕಲ್‌ ಶೋ ನಲ್ಲಿ ಚಿತ್ರ ನೋಡಿದಾಗ ಎಲ್ಲರ ಮುಖದಲ್ಲಿ ಭರವಸೆಯ ನಗು ಮೂಡಿತ್ತು. ಆ ನಗು ಪ್ರೇಕ್ಷಕನ ಮುಖದಲ್ಲೂ ಮೂಡಲಿದೆ ಎಂಬ ಭರವಸೆ ಇದೆ ಎನ್ನುತ್ತಾರೆ ನಾಯಕ ಮಿಲಿಂದ್‌.