ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಸಾಮಾನ್ಯವಾಗಿ 3ರಿಂದ 5 ವರ್ಷ ವಾರಂಟಿ ಇರುತ್ತದೆ. ಆದರೆ, ಹೊಂಡಾ ಸಂಸ್ಥೆಯ ಬೈಕ್ ಮತ್ತು ಸ್ಕೂಟರ್ ಗಳಿಗೆ 10 ವರ್ಷದವರೆಗೆ ವಾರಂಟಿ ಇದೆ. 250 ಸಿಸಿವರೆಗಿನ ತನ್ನ ದ್ವಿಚಕ್ರ ವಾಹನಗಳಿಗೆ 10 ವರ್ಷದವರೆಗೆ ವಾರಂಟ್ ಆಫರ್ ಕೊಡುವ ಇಡಬ್ಲ್ಯೂ ಪ್ಲಸ್ ಸ್ಕೀಮ್ ಅನ್ನು ಹೀರೋ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ತಿಳಿಸಿದೆ.
ಹೊಂಡಾದ ಎಕ್ಸ್ ಟೆಂಡೆಡ್ ವಾರಂಟಿ ಪ್ಲಸ್ ಹಳೆಯ ಹೊಂಡಾ ದ್ವಿಚಕ್ರ ವಾಹನಗಳಿಗೆ ವಾರಂಟಿ ಕವರೇಜ್ ವಿಸ್ತರಿಸುವ ಸ್ಕೀಮ್ ಆಗಿದೆ. 150 ಸಿಸಿ ಯಿಂದ ಹಿಡಿದು 250 ಸಿಸಿವರೆಗಿನ ಅದರ ಟೂ ವೀಲರ್ ಗಳಿಗೆ ಈ ವಾರಂಟಿ ವಿಸ್ತರಣೆಯ ಅವಕಾಶ ಇದೆ.
ಹೊಂಡಾ ಸ್ಕೂಟರ್ ಅಥವಾ ಬೈಕ್ ಖರೀದಿಸಿದ ಏಳರಿಂದ ಒಂಬತ್ತನೇ ವರ್ಷದಲ್ಲಿ ವಾರಂಟಿ ವಿಸ್ತರಣೆ ಮಾಡಬಹುದು. ನೀವು ವಾಹನ ಮಾರಿದಾಗಲೂ ಈ ವಾರಂಟಿಯನ್ನೂ ವರ್ಗಾವಣೆ ಮಾಡಬಹುದು. ರಿನಿವಲ್ ಕೂಡ ಸಾಧ್ಯವಿದೆ.
ಹೊಂಡಾ ಎಕ್ಸ್ ಟೆಂಡೆಡ್ ವಾರಂಟಿ ಪ್ಲಸ್ ಪ್ರೋಗ್ರಾಮ್ ಅಡಿಯಲ್ಲಿ ನೀವು ವಾಹನ ಖರೀದಿಸಿದ 7ನೇ ವರ್ಷದಲ್ಲಿ 3 ವರ್ಷ ವಾರಂಟಿ ವಿಸ್ತರಿಸುವ ಆಯ್ಕೆ ಆರಿಸಿಕೊಳ್ಳಬಹುದು. 8ನೇ ವರ್ಷದಲ್ಲಿ 2 ವರ್ಷದ ಪಾಲಿಸಿ ಪಡೆಯಬಹುದು. 9ನೇ ವರ್ಷದಲ್ಲಿ ಒಂದು ವರ್ಷದ ಪಾಲಿಸಿ ಪಡೆಯಬಹುದು. ಈ ಸ್ಕೀಮ್ ನಲ್ಲಿ ಹೊಂಡಾ ಸ್ಕೂಟರ್ ಗಳಾದರೆ 1,20,000 ಕಿಮೀವರೆಗೂ ವಾರಂಟಿ ಕವರೇಜ್ ಇರುತ್ತದೆ. ಬೈಕ್ ಗಳಾದರೆ 1,30,000 ಕಿಮೀವರೆಗೂ ಆಗುತ್ತದೆ.
ಹೊಂಡಾ ಎಕ್ಸ್ಟೆಂಡೆಡ್ ವಾರಂಟಿ ಪ್ಲಸ್ ಬೆಲೆ ಎಷ್ಟು?
ಹೊಸ ಹೊಂಡಾ ವಿಸ್ತರಿತ ವಾರಂಟಿ ಪ್ಲಸ್ ಸ್ಕೀಮ್ 150 ಸಿಸಿ ಬೈಕ್ ಮಾಡಲ್ ಗಳಿಗಾದರೆ 1,317 ರೂ ಬೆಲೆ ಇದೆ. 150ಸಿಸಿ ಮೇಲ್ಟಟ್ಟು 250 ಸಿಸಿವರೆಗಿನ ಮಾಡೆಲ್ಗಳಾದರೆ ವಿಸ್ತೃತ ವಾರಂಟಿಯ ಬೆಲೆ ಅಂದಾಜು 1,667 ರೂ ಇದೆ.