ಕೇಂದ್ರ ಲೋಕ ಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 111 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸೈಂಟಿಸ್ಟ್ ಬಿ, ಅಸಿಸ್ಟೆಂಟ್ ಡೈರೆಕ್ಟ್, ಫಿಶರೀಸ್ ರಿಸರ್ಚ್ ಇನ್ವೆಸ್ಟಿಗೇಶನ್ ಆಫೀಸರ್, ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್, ಡೆಪ್ಯುಟಿ ಲೆಜಿಸ್ಲೇಟಿವ್ ಕೌನ್ಸಿಲ್ ಹಾಗೂ ಇತರೆ ಹುದ್ದೆಗಳು ಖಾಲಿ ಇವೆ. ಫೆಬ್ರವರಿ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜನವರಿ 14ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಹುದ್ದೆಯ ಮಾಹಿತಿ:
ಡೆಪ್ಯುಟಿ ಕಮಿಷನರ್ (ಹಾರ್ಟಿಕಲ್ಚರ್)-1
ಅಸಿಸ್ಟೆಂಟ್ ಡೈರೆಕ್ಟರ್ (ಟಾಕ್ಸಿಕಾಲಜಿ)- 1
ಸೈಂಟಿಸ್ಟ್ ಬಿ (ನಾನ್- ಡಿಸ್ಟ್ರಕ್ಟಿವ್)-1
ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)-1
ಫಿಶರೀಸ್ ರಿಸರ್ಚ್ ಇನ್ವೆಸ್ಟಿಗೇಶನ್ ಆಫೀಸರ್- 1
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಸೆನ್ಸಸ್ ಆಪರೇಶನ್ (ಟೆಕ್ನಿಕಲ್)-6
ಅಸಿಸ್ಟೆಂಟ್ ಡೈರೆಕ್ಟರ್(ಐಟಿ)-4
ಸೈಂಟಿಸ್ಟ್ ಬಿ (ಟಾಕ್ಸಿಕಾಲಜಿ)-1
ಸೈಂಟಿಸ್ಟ್ ಬಿ (ಸಿವಿಲ್ ಎಂಜಿನಿಯರಿಂಗ್)-9
ಜೂನಿಯರ್ ಟ್ರಾನ್ಸ್’ಲೇಶನ್ ಆಫೀಸರ್- 76
ಡೆಪ್ಯುಟಿ ಲೆಜಿಸ್ಲೇಟಿವ್ ಕೌನ್ಸಿಲ್ (ಹಿಂದಿ ಬ್ರಾಂಚ್)-3
ಅಸಿಸ್ಟೆಂಟ್ ಎಂಜಿನಿಯರ್ ಗ್ರೇಡ್-1- 4
ಸೀನಿಯರ್ ಸೈಂಟಿಫಿಕ್ ಆಫೀಸರ್- 2
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳು ಒಮ್ಮೆ ಅರ್ಜಿ ಶುಲ್ಕ ಪಾವತಿಸಿದರೆ ಅದನ್ನು ಮರುಪಾವತಿಸಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.