ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 406
ಎನ್ಡಿಎ
ಸೇನೆ- 208 ಹುದ್ದೆಗಳಲ್ಲಿ 10 ಮಹಿಳಾ ಅಭ್ಯರ್ಥಿಗಳಿಗೆ.
ನೌಕಾ ಸೇನೆ- 42 ಹುದ್ದೆಗಳಲ್ಲಿ 6 ಮಹಿಳಾ ಅಭ್ಯರ್ಥಿಗಳಿಗೆ.
ವಾಯು ಸೇನೆ- ಫ್ಲೈಯಿಂಗ್ನಲ್ಲಿ 92 ಹುದ್ದೆಗಳಲ್ಲಿ 2 ಮಹಿಳೆಯರಿಗೆ, ಗ್ರೌಂಡ್ ಡ್ಯೂಟಿ (ತಾಂತ್ರಿಕ): 18 ಹುದ್ದೆಗಳಿಗೆ 2 ಮಹಿಳಾ ಅಭ್ಯರ್ಥಿಗಳಿಗೆ, ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ) 10 ಹುದ್ದೆಗಳಲ್ಲಿ 2 ಮಹಿಳೆಯರಿಗೆ.
ನೌಕಾ ಅಕಾಡೆಮಿ- 36 ಹುದ್ದೆಗಳಲ್ಲಿ 5 ಮಹಿಳಾ ಅಭ್ಯರ್ಥಿಗಳಿಗೆ.
ವಿದ್ಯಾರ್ಹತೆ: ಪಿಯುಸಿ ಪೂರ್ಣಗೊಳಿಸಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಅಭ್ಯಾಸ ಮಾಡಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಅವಿವಾಹಿತರಾಗಿದ್ದು, 2006ರ ಜುಲೈ 2ರಿಂದ 2009 ಜುಲೈ 1ರೊಳಗೆ ಜನಿಸಿರಬೇಕು.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎನ್ಡಿಎ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರೆ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಭರಿಸಬೇಕು.
ಆಯ್ಕೆ ಪ್ರಕ್ರಿಯೆ: ಲಿಖಿತ, ಬೌದ್ಧಿಕ, ವ್ಯಕ್ತಿತ್ವ, ಪೈಲಟ್ ಆಪ್ಟಿಟ್ಯೂಡ್ ಪರೀಕ್ಷೆ ಜೊತೆಗೆ ಸಂದರ್ಶನ.
ಡಿಸೆಂಬರ್ 11ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಡಿ.31 ಕಡೇಯ ದಿನ. ಅರ್ಜಿ ಪರಿಷ್ಕರಣೆಗೆ ಜನವರಿ 1ರಿಂದ ಜನವರಿ 7ರವರೆಗೆ ಅವಕಾಶವಿದೆ. ಏಪ್ರಿಲ್ 13ರಂದು ಪರೀಕ್ಷೆ ನಡೆಯಲಿದೆ.
ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳಿವೆ.
ಈ ಕುರಿತು ಹೆಚ್ಚಿನ ಮಾಹಿತಿಗೆ upsc.gov.in ಇಲ್ಲಿಗೆ ಭೇಟಿ ನೀಡಿ.