ಮನೆ ಯೋಗಾಸನ ಊರ್ಧ್ವ ಕುಕ್ಕುಟಾಸನ

ಊರ್ಧ್ವ ಕುಕ್ಕುಟಾಸನ

0

 ‘ಉರ್ಧ್ವ’ ವೆಂದರೆ ಮೇಲ್ಗಡೆ.‘ಕುಕ್ಕುಟ’ವೆಂದರೆ ಹುಂಜ ಈ ಆಸನದ ಭಂಗಿಯಲ್ಲಿ ದೇಹವನ್ನು ಬಿಂಕದಿಂದ ಸೆಡೆದುಕೊಂಡ ‘ಜಂಬದ ಕೋಳಿ’ಯನ್ನು ಹೋಲುವುದರಿಂದ ಈ ಹಾಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ:-

1. ಮೊದಲು ಸಾಲಂಬಶೀರ್ಷಾಸನ ಎಂಬ ಒಂದು. ದ ಭಂಗಿಯನ್ನು ಅಬ್ಬೆಸಿಸಬೇಕು.

2. ಬಳಿಕ,ಸಮ ಸ್ಥಿತಿಯನ್ನು ಅಂದರೆ ಸ್ಥಿರತೆಯನ್ನು ಗಳಿಸಿದಮೇಲೆ, ಎಡಪಾದವನ್ನು ಬಲತೊಡೆಯ ಮೂಲಕ್ಕೂ ಮತ್ತು ಬಲ ಪಾದವನ್ನು ಎಡತೊಡೆಯ ಮೂಲಕ್ಕೂ ಸೇರಿಸಿ, ‘ಪದ್ಮಾಸನ’ ಭಂಗಿಗೆ ತಂದು ಅನಂತರ ಉಸಿರನ್ನು ಹೊರಕ್ಕೆ ಬಿಡುತ್ತ ಕಾಲುಗಳನ್ನು ಬಗ್ಗಿಸಿ ಅವನ್ನು ಆದಷ್ಟು ಕಂಕುಳುಗಳ ಬಳಿ ಬರುವಂತೆ ಮೇಲ್ದೋಳಿನ ಹಿಂಬದಿಯ ಮೇಲೆ ಒರಗಿಸಿರಬೇಕು ಈ ಭಂಗಿಯನ್ನು ಸ್ಥಿರಗೊಳಿಸಿ ಸಮವಾದ ಉಸಿರಾಟ ನಡೆಸುತ್ತ ಸಮತೋಲನ ಸ್ಥಿತಿಗೆ ತರಬೇಕು.

3. ಮತ್ತೆ ಉಸಿರನ್ನು ಹೊರಕ್ಕೆ ಬಿಟ್ಟು ಅಂಗೈಗಳನ್ನು ಭದ್ರವಾಗಿ ನೆಲದ ಮೇಲೂರಿ, ಮುಂಡವನ್ನು ಮೆಲ್ಲಕ್ಕೆ ಸೆಳೆದು,ತಲೆಯನ್ನು ನೆಲದಿಂದ ಮೇಲೆತ್ತಬೇಕು.ಹೀಗೆ ಮಾಡುವಾಗ ತೋರಿಸಿರುವ ಚಲನವಲನಗಳನ್ನು ಕ್ರಮವಾಗಿ ಅನುಸರಿಸಬೇಕು ಆಮೇಲೆ ತೋಳುಗಳನ್ನು ನೇರವಾಗಿ ಹಿಗ್ಗಿಸಿ ಪೃಷ್ಠಗಳನ್ನು ಮೇಲಕ್ಕೆತ್ತಿ ಕತ್ತನ್ನು ಹೀಗಿಸಿ  ತಲೆಯನ್ನು  ಆದಷ್ಟೂ ಎತ್ತರ ಮಾಡಿರಬೇಕು.

4. ಈ ಭಂಗಿಯ ಸ್ಥಿತಿಯಲ್ಲಿ ವಪೆಯ ಬಳಿಯಲ್ಲಿರುವ ಮಾಂಸ ಖಂಡಗಳನ್ನು ಬಿಗಿಗೊಳಿಸುವುದರ ಮೂಲಕ ಕೈಗಳ ಆಧಾರದ ಮೇಲೆ ದೇಹವನ್ನು ಕೆಲವು ಸೆಕೆಂಡುಗಳ ಕಾಲ ಸಮತೊಲಿಸಿಟ್ಟಿರಬೇಕು.

5. ಆ ಬಳಿಕ, ಉಸಿರನ್ನು ಹೊರಕ್ಕೆಬಿಟ್ಟು ಮೊಣಕೈಗಳನ್ನು ಬಗ್ಗಿಸಿ ಭಂಗಿಯನ್ನ ನುಸರಿಸಿ ತಲೆಯನ್ನು ನೆಲದ ಮೇಲಿ ರಿಸಿ, ಬಳಿ „ಪದ್ಮಾಸನದಲ್ಲಿಯ ಪಾದಗಳ ಹೆಣಿಗೆಯನ್ನು ಬಿಡಿಸಿ ಮತ್ತೆ ’ಸಾಲಂಬಶೀರ್ಷಾಸನ ಎರಡು’ ದ  ಭಂಗಿಗೆ ಹೊಂದಿರಬೇಕು.

6. ಮತ್ತೆ ‘ಪದ್ಮಾಸನ’ವನ್ನು ಬೇರೆ ರೀತಿಯಿಂದ ಅಂದರೆ ಮೊದಲು ಎಡಪಾದವನ್ನು ಬಲತೊಡೆಯ ಮೂಲಕ್ಕೂ ಬಲಪಾದವನ್ನು ಎಡ ತೊಡೆಯ ಮೂಲಕ್ಕೂ ಸೇರುವುದರ ಮೂಲಕ ‘ ’ಪದ್ಮಾಸನ’ವನ್ನು ರಚಿಸಿ ಆಮೇಲೆ ಈ ಆಸನದ ಭಂಗಿಯನ್ನು ಮೇಲೆ ವಿವರಿಸಿದ ಕ್ರಮದಲ್ಲಿ ಅಭ್ಯಾಸ ಬೇಕು.

7. ಎರಡು ಕಡೆಯ ಭಂಗಿಗಳಲ್ಲಿ ನೆಲೆಸಿರುವ ಕಾಲ ಸಮವಾಗಿಸಿ ‘ಸಲಾಂಬ ಶೀರ್ಷಾ ಸನ’ ಎರಡಾದ ಭಂಗಿಗೆ ಮತ್ತೆ ಹಿಂದಿರುಗಿ ಕಾಲುಗಳನ್ನು ನೆಲಕ್ಕೆ ಇಳಿಸಿ ವಿಶ್ರಮಿಸಿಕೊಳ್ಳಬೇಕು.ಆಸನಾಭ್ಯಾಸದಲ್ಲಿ ಚೆನ್ನಾಗಿ ನುರಿತವರು ಆಗ ಊರ್ಧ್ವಧನುರಾಸನಕ್ಕೆ ಸರಿದು ಅಂದರೆ ಕಾಲುಗಳನ್ನು ಬೆನ್ನ ಹಿಂಬದಿಗೆ ಇಳಿಬಿಟ್ಟು ತೋಳುಗಳನ್ನು ನೀಳಾವಾಗಿ ಚಾಚಿ, ಆ ಬಳಿಕ ‘ತಾಡಾಸನ’ಕ್ಕೆ ಬಂದು ನಿಲ್ಲಬೇಕು.ಆಸನ ಭಂಗಿಗಳಲ್ಲಿ ಪರಿಣಿತಿಯನ್ನು ಪಡೆದ ಮೇಲೆ ‘Representative ಅಭ್ಯಸಿಸಿದರೆ ಈ ಬಳಿ ಆದು ಸುಗಮವಾದ ವ್ಯಾಯಾಮವಾಗಿ ಪರಿಣಮಿಸುತ್ತದೆ.

 ಪರಿಣಾಮಗಳು :-

   ಈ ಆಸನದ ಭಂಗಿಯಲ್ಲಿ ಬೆನ್ನೆಲುಬು ಚೆನ್ನಾಗಿ ಹಿಗ್ಗಿ ‘ಪಶ್ಚಿಮ ತ್ತಾನಾಸನ’ದಲ್ಲಿ ಲಭಿಸುವ ಪ್ರಯೋಜನಗಳು ಇದರಲ್ಲಿ ಕ್ಷಿಪ್ರದಲ್ಲಿಯೇ  ದೊರೆಕುತ್ತದೆ.ಅಲ್ಲದೆ ತೋಳುಗಳು ಮತ್ತು ಕಿಬ್ಬೋಟ್ಟೆಯೊಳಗಿನ  ಅಂಗಾಂಗಗಳು ಬಲಗೊಳ್ಳುವುವು.

    ಈ ವಿಧವಾದ ತೊಡಕಿನ ಮತ್ತು ಪಿತ್ತತರವಾದ ಆಸನಗಳು ಕ್ಲಿಷ್ಟತರವಾದ ಸಾಮಾನ್ಯವಾದ ಮತ್ತು  ಸುಲಭವಾದ ಆಸನಗಳಿಗಿಂತಲೂ ಬಲು ಬೇಗ ಹೆಚ್ಚು ಫಲವನ್ನು ಕೊಡುತ್ತವೆ. ದೇಹವು ಬೇಕಾದ ಹಾಗೆ ಬಗ್ಗುವ ಸ್ಥಿತಿಯನ್ನು ಗಳಿಸಿದಾಗ ಸಾಮಾನ್ಯ ಭಂಗಿಗಳು ಅದಕ್ಕೆ ಹೆಚ್ಚು ಫಲವನ್ನು ಗಳಿಸಿಕೊಡಲಾರವು,ಅಂದರೆ ಅವುಗಳಿಂದ ಹೆಚ್ಚು ಪ್ರಯೋಜನರಾಗಲಾರದು, ಈ ಕಾರಣದಿಂದ ಜಾಣರಾದವರು ಸಾಮಾನ್ಯವಾದ ಆಸನಭಂಗಿಗಳ ಗೋಜಿಗೆ ಹೋಗದೆ,ತೊಡಕಿನ ಮತ್ತು ಕ್ಲಿಷ್ಟವಾದ ಆಸನಗಳ ಅಭ್ಯಾಸಕ್ಕೆ ಕೈ ಹಚ್ಚುತ್ತಾರೆ   ವಿದ್ಯಾಂಸನಾದವನು ಪ್ರತಿದಿನ ಭಾಷೆಯ ವರ್ಣಮಾಲೆಯನ್ನು ಪಠಿಸುವನೇ,?ಅದರಂತೆಯೇ ಈ ಆಸನಾಭ್ಯಾಸಗಳೂ ಸಹ. ಆದರೆ, ನರ್ತಕ ನರ್ತಕಿಯರು ಪ್ರತಿದಿನವೂ ಅತಿಮುಖ್ಯವೆನಿಸಿದ ಕುಣಿತದ ಮೊದಲ ಹೆಜ್ಜೆಗಳನ್ನು ಬಿಡದೆ ಅಭ್ಯಾಸಿಸುವಂತೆ ಯೋಗ್ಯ ಭ್ಯಾಸಗಳು ಪ್ರತಿನಿತ್ಯವೂ ಬಿಡದೆ ‘ಶ್ರೀರ್ಷಾಸನ’ರಿಂದ ಮತ್ತು ‘ಸರ್ವಾಂಗಾಸನ’ ಇರುವ ಆಸನ ಚಕ್ರಗಳನ್ನು ಅಭ್ಯಸಿಸುತ್ತಲೇ ಬರಬೇಕು .