ಮನೆ ಯೋಗಾಸನ ಊರ್ಧ್ವಮುಖ ಪಶ್ಚಿಮೋತ್ಥಾನಾಸನ

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

0

ಊರ್ಧ್ವಮುಖ ಪಶ್ಚಿಮೋತ್ಥಾನಾಸನಕ್ಕೆ ವಿಪರೀತ ನಾವಾಸನ ಹಾಗೂ ವಿಪರೀತ ಮೇರುದಂಡಾಸನ ಎಂಬ ಹೆಸರುಗಳೂ ಇವೆ.

Join Our Whatsapp Group

ಮಾಡುವ ಕ್ರಮ

1)    ನೆಲದ ಮೇಲೆ ಅಂಗಾತನಾಗಿ, ನೇರವಾಗಿ, ಬೆನ್ನನ್ನು ನೆಲಕ್ಕೆ ತಗಲಿಸಿಕೊಂಡು ಮಲಗಬೇಕು.

2)    ನಂತರ ಉಸಿರನ್ನು ನಿಧಾನವಾಗಿ ಹೊರಗೆ ಬಿಡುತ್ತಾ ಕಾಲುಗಳನ್ನು ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಿ ಭೂಮಿಗೆ ಲಂಬವಾಗಿರಿಸಬೇಕು. ಆನಂತರ ಚಿತ್ರದಲ್ಲಿ ತೋರಿಸಿರುವಂತೆ ಸೊಂಟದ ಮೇಲ್ಭಾಗದ ಶರೀರವನ್ನು ನೆಲದಿಂದ ಮೇಲಕ್ಕೆತ್ತಿ ಎರಡೂ ಕೈಗಳಿಂದ ಕಾಲುಗಳನ್ನು ಭದ್ರವಾಗಿ ಹಿಡಿದು ಕೊಳ್ಳಬೇಕು.

3)  ಈ ಸ್ಥಿತಿಯಲ್ಲಿ ಸೊಂಟ ಮಾತ್ರ ನೆಲದ ಮೇಲೆ ಇರುತ್ತದೆ. ಮಂಡಿಯನ್ನು ನೇರವಾಗಿರಿಸುವುದರೊಂದಿಗೆ ಎದೆಯನ್ನು ಮಂಡಿಗಳಿಗೆ ಮುಟ್ಟಿಸಲು ಪ್ರಯತ್ನಿಸಬೇಕು. ಇದೇ ಸ್ಥಿತಿಯಲ್ಲಿ ಆದಷ್ಟು ಹೆಚ್ಚು ಹೊತ್ತು ಇದ್ದು ಸಮತೋಲನವನ್ನು ಪಡೆಯುವುದುತ್ತಮ.

ಲಾಭಗಳು

ಹೊಟ್ಟೆ, ಎದೆ, ತೊಡೆ ಹಾಗೂ ಸೊಂಟದೊಳಗಿನ ಅನೇಕ ದೋಷಗಳು ಈ ಆಸನದ ಅಭ್ಯಾಸದಿಂದ ದೂರವಾಗುವುವು. ತೀವ್ರವಾದ ಬೆನ್ನು ನೋವಿನಿಂದ ನರಳುವವರಿಗೆ ಇದು ಹೆಚ್ಚು ಸಹಾಯಕಾರಿ.

ಹಿಂದಿನ ಲೇಖನಸತತ ಮಾರ್ಗದಿ  ಸಂತತ
ಮುಂದಿನ ಲೇಖನಹಾಸ್ಯ