ಮನೆ ಯೋಗಾಸನ ಸರ್ವಾಂಗಸನದಲ್ಲಿ ಊರ್ಧ್ವಪದ್ಮಾಸನ

ಸರ್ವಾಂಗಸನದಲ್ಲಿ ಊರ್ಧ್ವಪದ್ಮಾಸನ

0

‘ಊರ್ಧ್ವ’ವೆಂದರೆ ಮೇಲೆ; ಪದ್ಮ= ಕಮಲ, ತಾವರೆ. ಸರ್ವಾಂಗಸನದ ಈ ವ್ಯತ್ಯಸ್ತ ಭಂಗಿಯಲ್ಲಿ ಕಾಲುಗಳನ್ನು ನೇರವಾಗಿ ಚಾಚ್ಚಿಡುವುದಕ್ಕೆ ಪ್ರತಿಯಾಗಿ, ಅವುಗಳನ್ನು ಮಂಡಿಗಳಲ್ಲಿ ಭಾಗಿಸಿ, ಬಲಪಾದವು ಎಡತೊಡೆಯ ಮೇಲೆಯೂ ಎಡಪಾದವು ಬರತೊಡೆಯ ಮೇಲೆಯೂ ಬರುವಂತೆ ಕಾಲುಗಳನ್ನು ಅಡಗಿಸಿ, ಈ ಮೂಲಕ ‘ಪದ್ಮಾ’ಸನವನ್ನು ಬಂಧಿಸಿ, ಆ ಭಂಗಿಯಲ್ಲಿ ನಿಲ್ಲಬೇಕು

Join Our Whatsapp Group

ಅಭ್ಯಾಸ ಕ್ರಮ

  1. ಮೊದಲು, ‘ ಸಾಲಂಬ ಸರ್ವಾಂಗಸನ’ದಿಂದ ಕಾಲುಗಳನ್ನು ಮಂಡಿಗಳಲ್ಲಿ ಭಾಗಿಸಿ, ಅವುಗಳನ್ನು ಒಂದರ ಮೇಲೊಂದು ಬರುವಂತೆ ಅಡಗಿಸಿಡಬೇಕು. ಅಂದರೆ ಮೊದಲು ಬಲಪಾದವನ್ನು ಎಡತೊಡೆಯ ಮೇಲಿಟ್ಟು ಬಳಿಕ ಎಡಪಾದವನ್ನು ಬಲ ತೊಡೆಯ ಮೇಲಿಡಬೇಕು.
  2. ಆಮೇಲೆ,ಹೀಗೆ ಹೆಣೆದ ಕಾಲುಗಳ ಪದ್ಮಾಸನವನ್ನು ನೇರವಾಗಿ ಮೇಲೆತ್ತಿ. ಮಂಡಿಗಳನ್ನು ಹತ್ತಿರ ಬರುವಂತೆ ಸರಿಸಿ, ಮತ್ತೆ ಕಾಲುಗಳನ್ನು ಸಾಧ್ಯವಾದಷ್ಟು ವಸ್ತಿಕುಹರದಿಂದ ದೂರ ಕ್ಕಿರುವಂತೆ ಅಳವಡಿಸಬೇಕು.
  3. ಈ ಭಂಗಿಯಲ್ಲಿ, ಆಳವಾಗಿ ಮತ್ತು ಸಮವಾಗಿ ಉಸಿರಾಡುತ್ತ ಸುಮಾರು 20 ಸೆಕೆಂಡುಗಳ ಕಾಲ ನಡೆಸಬೇಕು.
  4. ಹಿಗ್ಗುವಿಕೆಯನ್ನು ಹೆಚ್ಚಿಸಲು, ತೋರಿಸಿರುವಂತೆ ಪಾರ್ಶ್ವ ಸರ್ವಂಗಾಸನದ ಅಭ್ಯಾಸ ಕ್ರಮದಲ್ಲಿ ಸೂಚಿಸಿರುವ ಬಗೆಯಿಂದ ಮುಂಡವನ್ನು ಒಂದು ಪಕ್ಕಕ್ಕೆ ತಿರುಚಿಡಬೇಕು.
  5. ಸರ್ವಾಂಗಾಸನದಲ್ಲಿಯ ಪಾಶ್ವಉರ್ಧ್ವಪದ್ಮಾಸನ — ಏಳು
  6. ‘ಪಾಶ್ವ’ ಎಂದರೆ ಪಕ್ಕ.
  7. ಪ್ರತಿಯೊಂದು ಪಕ್ಕದಲ್ಲಿಯೂ 10 15 ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.
  8. ಬಳಿಕ, ಉಸಿರನ್ನು ಹೊರಕ್ಕೆ ಬಿಟ್ಟು ಮತ್ತೆ ಉರ್ಧ್ವ ಪದ್ಮಾಸನ ಭಂಗಿಗೆ ತಂದು, ಸ್ವಲ್ಪ ಕಾಲ ವಿಶ್ರಮಿಸಿಕೊಳ್ಳಬೇಕು.
  9. ಈಗ ಉಸಿರನ್ನು ಹೊರಕ್ಕೆ ಬಿಟ್ಟು ಬೆನ್ನನ್ನು ಹಿಂಬಾಗಕ್ಕೆ ಬಿಲ್ಲಿನಂತೆ ಬಗ್ಗಿಸಬೇಕು ಇದನ್ನು ಸಾಧಿಸಲು “ಸೇತುಬಂಧಸರ್ವಾಂಗಸನ ಅಭ್ಯಾಸ ಕ್ರಮವನ್ನನು ಸರಿಸಬೇಕು. ಆ ಬಳಿಕ, ತೊಡೆಗಳನ್ನು ಮೆಲ್ಲಗೆ ಹಿಂಭಾಗಕ್ಕೆ ಹಿಗ್ಗಿಸಿ, ಮಂಡಿಗಳನ್ನು ನೆಲಕ್ಕೆ ಮುಟ್ಟಿಸಿ,ದೇಹವನ್ನು ಕೈಗಳ ಆಸರೆಗೊಳಪಡಿಸಿ, ಸೇತುವೆಯಾಕಾರಕ್ಕೆ ತಂದು ನಿಲ್ಲಿಸಬೇಕು. ಇಂಥ ಆಸನದ ಹೆಸರು.
    ಉತ್ತಾನಪದ್ಮಮಯೂರಾಸನ— 25
    ‘ಉತ್ತಾನ’ವೆಂದರೆ ಹೆಚ್ಚಾಗಿ ಹಿಗ್ಗಿಸಿದ ;ಪದ್ಮ =ತಾವರೆ ಕಮಲ; ‘ಮಯೂರ ’ನವಿಲು.
  10. ಈ ಭಂಗಿಯಲ್ಲಿ ಸುಮಾರ್ 10 15 ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.
  11. ಉಸಿರನ್ನು ಹೊರಬಿಟ್ಟು, ಉರ್ಧ್ವಪದ್ಮಾಸನದ ಬಭಂಗಿಗೆ ಬರಬೇಕು.
  12. ಆಮೇಲೆ,ಕಾಲುಗಳನ್ನು ಬಿಚ್ಚಿ ಸಾಲಂಬ ಸರ್ವಾಂಗಾಸನಕ್ಕೆ ಹಿಂದಿರುಗಿ, ಆಸನಕ್ರಮವನ್ನು ವ್ಯತ್ಯಾಸ ಮಾಡಿ, ಅಂದರೆ ಎಡಪಾದಗಳನ್ನು ಬಲತೊಡೆಯ ಮೇಲೆಯೂ ಬಳಿಕ ಬಲಪಾದವನ್ನು ಎಡತೊಡೆಯಮೇಲೆಯೂ ಬರುವಂತೆ ಕಾಲುಗಳನ್ನು ಅಡಗಿಸಿಟ್ಟು ಈ ಭಂಗಿಯನ್ನು ಮತ್ತೆ ಮಾಡಬೇಕು ಅಲ್ಲದೆ, ಹಿಂದೆ ವಿವರಿಸಿದಂತೆಯೇ ಪ್ರತಿ ಭಂಗಿಯಲ್ಲೂ ನೆಲಸುವ ಕಾಲ ಸಮವಾಗಿರಬೇಕು.