ಇಂದಿನ ದಿನಗಳಲ್ಲಿ ಮಾಧ್ಯಮ ಜಗತ್ತು ರಕ್ಷಾಸಾಕಾರದಲ್ಲಿ ಬೆಳೆದಿದೆ.ಅದರಲ್ಲಿಯೂ ಟಿ.ವಿ ಮತ್ತು ಅಂತರ್ಜಲ ಸೌಲಭ್ಯಗಳು ಸಮಾಜದ ಮೇಲೆ ಉಳಿದೆಲ್ಲ ಮಾಧ್ಯಮಗಳು ಬಿರುವುದಕ್ಕಿಂತ ಹೆಚ್ಚು ಪರಿಣಾಮವನ್ನು ಬೀರುತ್ತವೆ. “ಟಿ.ವಿ,ಸಿನಿಮಾಗಳಿಂದ ಮಕ್ಕಳು ಹಾಳಾದರು” ಎಂಬ ರೀತಿಯ ಮಾತುಗಳನ್ನು ಅನೇಕ ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ. ಮಾಧ್ಯಮಗಳಿಂದಾಗಿ ನಾವೇಕೆ ಹಾಳಾಗಬೇಕು?ಹಾಳಾಗಬೇಕಾದ ಅಗತ್ಯವಿಲ್ಲ.ಆದರೂ ಮಾಧ್ಯಮಗಳು ಸಾಕಷ್ಟು ಕೆಟ್ಟ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತವೆ ಎಂಬುದನ್ನು ನಿರಾಕರಿಸುವಂತಿಲ್ಲ.
ಮಾಧ್ಯಮಗಳು ಕೆಟ್ಟ ರೀತಿಯ ಪರಿಣಾಮಗಳನ್ನು ಉಂಟು ಮಾಡಲು ನಿಜವಾಗಿ ಮಾಧ್ಯಮಗಳು ಕಾರಣವಾಗುವುದಿಲ್ಲ. ಬದಲು ನಾವು ಕಾರಣರಾಗಿರುತ್ತೇವೆ. ಯಾಕೆಂದರೆ ಹೋಮೋ ಸೇಪಿಯನ್ಸ್ ಎಂಬ ತಳಿಯ ಮನುಷ್ಯ ಸೃಷ್ಟಿಯಲ್ಲಿರುವ ಅನೇಕ ಜೀವಿಗಳಲ್ಲಿ ಒಂದು ಮೃಗವೂ ಆಗಿದ್ದಾನೆ. ಕ್ರೌರ್ಯದ ವಿಚಾರಕ್ಕೆ ಬಂದರೆ ಮನುಷ್ಯನಿಗಿಂತ ಕ್ರೂರವಾದ ಮತ್ತೊಂದು ಮೃಗ ಸೃಷ್ಟಿಯಲ್ಲಿ ಇಲ್ಲ. ಅಂದರೆ ದುರ್ನ ಡತೆ ಹಾಗೂ ಅತೀ ಕ್ರೂರವಾದ ನಡವಳಿಕೆಗಳು ಮನುಷ್ಯನ ಮೂಲಭೂತ ಪ್ರವೃತ್ತಿಗಳೇ ಆಗಿವೆ.
ಆದರೆ ಕೇವಲ ಮಾನವ ಜನಾಂಗಕ್ಕೆ ಮಾತ್ರ ಸಾಮಾಜಿಕ ಜೀವನ ಮತ್ತು ನಾಗರಿಕತೆ ಎಂಬುದು ಇದೆ. ದೀರ್ಘಕಾಲದ ನಾಗರಿಕ ಜೀವನವು ಮಾನವನ ಸಮಾಜದಲ್ಲಿ ಅನೇಕ ರೀತಿಯ ವಿಕಾಸಾತ್ಮಕ ಕಾರ್ಯಗಳನ್ನು ಮಾಡಿದೆ. ವಿಕಾಸದ ಕಾರ್ಯ ತತ್ವಗಳನ್ನು ನಿಂತಿರುವುದು ಜೀವನ ಮೌಲ್ಯಗಳ ಆಧಾರದಲ್ಲಿ. ಅದರಿಂದಲೇ ವ್ಯಕ್ತಿತ್ವ ವಿಕಾಸವು ಜೀವನ ಮೌಲ್ಯಗಳು ಪ್ರತ್ಯೇಕ ಪ್ರತ್ಯೇಕವಾಗಿ ಇರುವುದಿಲ್ಲ. ಮೌಲ್ಯಗಳ ಆಧಾರದಲ್ಲಿಯೇ ವ್ಯಕ್ತಿತ್ವದ ವಿಕಾಸವು ನಡೆಯುತ್ತಿರುತ್ತವೆ. ಈ ರೀತಿಯ ವಿಕಾಸ ಕಾರ್ಯಗಳು ಮನುಷ್ಯನ ಮೂಲ ಪವೃತ್ತಿಯ ದುರ್ಗುಣಗಳು ಮತ್ತು ಕೌರ್ಯವನ್ನು ಅದುಮಿ ಹಿಡಿದಿರುತ್ತವೆ.ಆದರೆ ಅದುಮಿ ಹಿಡಿದಿರುತ್ತದೆ ಎಂದರೆ ನಿರ್ಮೂಲನಗೊಂಡಿರುತ್ತದೆ ಎಂದು ಅರ್ಥವಲ್ಲ. ಮೂಲ ಪ್ರವೃತ್ತಿಯನ್ನು ನಿರ್ಮೂಲಗೊಳಿಸಲು ಆಗುವುದಿಲ್ಲ.ನಿಯಂತ್ರಿಸಲು ಆಗುತ್ತದೆ ಅಷ್ಟೇ. ಅಂದರೆ ಒಳ್ಳೆಯ ಮನುಷ್ಯರಾಗುವುದು ಎಂದರೆ ನಮ್ಮೊಳಗೆ ಇರುವ ಕೆಟ್ಟತನಗಳನ್ನು ನಿಗ್ರಹಿಸುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಆಗಿದೆ. ಯಾವಾಗ ತನ್ನ ಮೂಲ ಪ್ರವೃತ್ತಿಯು ಕೆಣಕಲ್ಪಡುತ್ತದೆಯೋ ಆಗ ಮನುಷ್ಯನು ತಾನು ಗಳಿಸಿಕೊಂಡು ವಿಕಾಸದ ಮೂಲ್ಯಗಳೊಂದಿಗೆ ಸಂಘರ್ಷಕ್ಕೆ ತೊಡಗುತ್ತಾನೆ. ಕೆಣಕಲ್ಪಟ್ಟ ಸಂಗತಿಗಳ ಶಕ್ತಿಯು ನಿಯಂತ್ರಿಕ ಶಕ್ತಿಗಿಂತ ಹೆಚ್ಚು ಬಲಿಷ್ಠವಿದ್ದರೆ ಮನುಷ್ಯ ತನ್ನ ಮೂಲ ಪ್ರವೃತ್ತಿಯ ಕ್ರೌರ್ಯ ಮತ್ತು ದುರ್ಗುಣಗಳನೆಲ್ಲ ವರ್ತನೆಯಲ್ಲಿ ತಂದುಕೊಳ್ಳುತ್ತಾನೆ. ಇಂಥಲ್ಲಿ ಮಾಧ್ಯಮಗಳು ಮನುಷ್ಯನ ಮೂಲ ಪ್ರವೃತ್ತಿಯನ್ನು ಕೆರಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಬಿಡುತ್ತವೆ.ಆಗ ಮನುಷ್ಯ ಕೆಟ್ಟದಾಗಿ ನಡೆದುಕೊಳ್ಳಲು ಪ್ರಾರಂಭಿಸುತ್ತಾನೆ. ಮಾಧ್ಯಮಗಳು ಜಗತ್ತು ವಿಸ್ತಾರವಾದಂತೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಮೌಲ್ಯಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಶಿಕ್ಷಣವು ಬಾರದೆ ಇರುವುದರಿಂದ ಉಂಟಾಗಿರುವ ಪರಿಣಾಮವಿದು. ಆದ್ದರಿಂದಲೇ ನಮ್ಮ ಮೌಲ್ಯ ಪ್ರಜ್ಞೆಯನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸಬೇಕು.ಮತ್ತು ಮಾಧ್ಯಮಗಳ ಕೆರಳಿಸುವ ಭಾಗವನ್ನು ಕೈ ಬಿಟ್ಟು ವಿಕಾಸಗೊಳಿಸುವ ಭಾಗವನ್ನು ಮಾತ್ರ ಸ್ವೀಕರಿಸಬೇಕು.