ಮನೆ ಜ್ಯೋತಿಷ್ಯ ಗರ್ಭಾಶಯ

ಗರ್ಭಾಶಯ

0

ಇಳಿಯುತ್ತದೆ. 40 ನೇ ವಾರದಲ್ಲಿ ಜನನವಾಗುತ್ತದೆ. .

 ಗರ್ಭದೋಷಗಳು :

ಈ ಗರ್ಭದೋಷಗಳು ಅನೇಕ ವಿಧದಲ್ಲಿ ಬರುತ್ತದೆ. ಕೆಲವು ಸಲ ಗರ್ಭವು ಗರ್ಭನಾಳದಲ್ಲಿ ಕೆಟ್ಟು ಬೆಳೆಯಲಾರಂಭಿಸುತ್ತದೆ. ಇದು ಬಹಳ ಅಪಾಯ, ಪಿಟ್ಯುಟರಿ ಗ್ರಂಥಿಗಳು ಸರಿಯಾಗಿ ಕಾಲಕ್ಕೆ ತಕ್ಕಂತೆ ಹಾರ್ಮೋನ್ ಗಳು ಸವಿಸದೆ ಮಾಸಿಕ ಋತುಗಳು ಕಾಲಕಾಲಕ್ಕೆ ಆಗದು ಗರ್ಭದ ಪದರಗಳು ಸರಿಯಾಗಿ ಬೆಳೆಯದೆ ಇರುವುದು, ಗರ್ಭದಲ್ಲಿ ಸಣ್ಣ ಗಡ್ಡೆಗಳು ಬೆಳೆಯುವುದು, ಗುಪ್ತಾಂಗದಲ್ಲಿ (ಯೋನಿ ಮಾರ್ಗದಲ್ಲಿ) ದೊಪಗಳು, ಸ್ತ್ರೀವ್ಯಾಧಿಗಳು, ಸಿಪ್ಲಿಸ್, ಗನೋರಿಯಾ, ನಾನಾ ಚರ್ಮವ್ಯಾಧಿ, ಉರಿಯಾಗಿ ನೀವು ಕಟ್ಟುವುದು, ಬಿಳಿ ಹೋಗುವುದು, ನಡು ನೋವು, ಹೊಟ್ಟೆನೋವು,

 ನಾರುಗಡ್ಡೆಗಳು  :

ಗರ್ಭಕೋಶದ ಸ್ನಾಯುತಂತುಗಳಲ್ಲಿ ದುರ್ಮಾಂಶದ ಉಂಡೆಗಳಂತೆ ಕಾಣುವುದೇ ನಾರು ಗಡ್ಡೆಗಳು. ಇದು ಶೇಕಡ 10-15 ಮಂದಿ ಮಹಿಳೆಯರಲ್ಲಿ ಅದೂ 35 ವರ್ಷ ಮೀರಿದವರಲ್ಲಿ ಹೆಚ್ಚಾಗಿ ಇರುತ್ತದೆ. ಅದರಲ್ಲಿ ಮಕ್ಕಳಾಗದೆ ಇರುವ ಶೇಕಡ 60 ರಷ್ಟು ಮಹಿಳೆಯರಲ್ಲಿರುತ್ತದೆ. ಇದರಲ್ಲಿ ಕೆಲವು ಒಳಗೆ, ಕೆಲವು ಹೊರಗೂ ಕಾಣಿಸಿಕೊಳ್ಳುತ್ತದೆ. ಸಣ್ಣ ಗುಳ್ಳೆಯಿಂದ ದೊಡ್ಡಗಾತ್ರದಲ್ಲಿ ಹುಟ್ಟಿಕೊಳ್ಳುತ್ತದೆ. ಇದರಲ್ಲಿ ಕೆಲವು ಬೇರು ಹೊಂದಿರುತ್ತದೆ. ಗರ್ಭಕೋಶದ ಒಳಗಿಂದ ಹೊರಗೆ ದಾಳಿಯಿಟ್ಟ ಗಡ್ಡಗಳುಬಹಳ ಅಪಾಯಕಾರಿ. ಯೋನಿಯೊಳಗೆ ಬೆಳೆದು ಸೋಂಕು ತಗುಲಿ ಲೈಂಗಿಕ ಕ್ರಿಯೆಯಲ್ಲಿ ಅಡಚಣೆ ಮಾಡುತ್ತದೆ. ಮುಂದುವರೆದರೆ ಕ್ಯಾನ್ಸರ್ ಗೂ ಬದಲಾಗುತ್ತದೆ.

 ಗರ್ಭಾಶಯ ಕ್ಯಾನ್ಸ‌ರ್ :

 ಗರ್ಭಾಶಯವನು ಮೂರು ಭಾಗಮಾಡಿದಾಗ ಮೇಲಿನ ಎರಡು ಭಾಗ ಗರ್ಭಾಶಯವಾದರೆ  ಕೊನೆಯ ಉಳಿದ ಭಾಗ – ಗರ್ಭಕಂಠ ಭಾಗ ಗರ್ಭಾಶಯದ ಒಡಲಿನಲ್ಲಿ ( ಮೇಲಿನ ಎರಡು ಭಾಗ ಕ್ಯಾನರ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ 55 ವರ್ಷದ ನಂತರ ಅವಿವಾಹಿತೆಯಾದಲ್ಲಿ ಸ್ಥೂಲಕಾಯರಾದರೆ, ಮಧುಮೇಹವಿದ್ದರೆ, ನಾರುಗಡ್ಡೆಯಿದರೆ ಅವರಿಗೆ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಮಾನವ ದೇಹವು ಕೊ 5 ಕೋಟಿ ಕೋಟಿ ಜೀವಕಣಗಳಿಂದ ತುಂಬಿದೆ ಇದರಲ್ಲಿ ಪ್ರತಿನಿತ್ಯ ಎಷ್ಟೋ ಜೀವಕಣಗಳು ನಾಶ ವಾಗುತ್ತವೆ ಮತ್ತು ಅಷ್ಟೇ  ಅವಶ್ಯಕವಾದ ಜೀವಕಣಗಳು ಹುಟ್ಟಿಕೊಳ್ಳುತ್ತವೆ ಆದರೆ ಕೆಲವು ಜೀವಕಣಗಳು ಅವಶ್ಯಕತೆಗಿಂತ ಅಧಿಕವಾಗಿ ಹೊಸದಾಗಿ ಹುಟಿಕೊಳ್ಳುತ್ತವೆ ಈ ರೀತಿ ಹೊಸ ಅವಶ್ಯಕತೆಯಿಲ್ಲದ  ಜೀವಕಣಗಳಿಗೆ ಕ್ಯಾನ್ಸರ್ ಮೂಲ ವಾಗುತ್ತದೆ. ಇದು ಎಲ್ಲೆಲ್ಲಿ ನೆಲೆಯೂರುತ್ತವೋ ಅಲ್ಲಲ್ಲಿ ಕ್ಯಾನ್ಸರ್ ಕಾಣಿಸಿ  ಕೊಳ್ಳುತ್ತವೆ. ಈಮರಿ ಕ್ಯಾನ್ಸರ್ ಕಣಗಳು ಮೂಲ ಕ್ಯಾನ್ಸರ್ ಅಷ್ಟೇ  ಅಪಾಯಕಾರಿ. ಇದಕ್ಕೆ ಮೆದುಳಿನ ಯಕೃತ್ ಶ್ವಾಸಕೋಶಗಳು ಒಳ್ಳೆಯ ನಿವಾಸಗಳು ಕ್ಯಾನ್ಸರ್  ಮೂಲ ಒಂದಾದರೆ, ಅದು ದೇಹದ ಆನೇಕ ಕಡೆ ಪ್ರಸಾರವಾಗುತ್ತದೆ ಇದು ವಿನಾಶಕಾರಿಯಾಗಿ ಮೂಳೆಗಳನ್ನೂ ಸಹ ಕೊರೆಯಬಹುದು. ಕ್ಯಾನರ್ ವ್ಯಾದಿಗೆ ನಿರ್ದಿಷ್ಟ ಕಾರಣ ಹುಡುಕುವುದು ಕಷ್ಟಕರ. ಆದರೂ ಕೆಲವನ್ನು ಹುಡುಕಿ ಹೇಳಬಹುದು.

 ನಾರುಗಡ್ಡೆ ಬರಲು ಕಾರಣ :

ಯುವತಿಯು ಪದೇ ಪದೇ ಗರ್ಭಪಾತ ಮಾಡಿಸಿಕೊಂಡರೆ, ಗರ್ಭಕೋಶದ ಲೋಳ್ಪರೆಗೆ ಧಕ್ಕೆಯಾಗಿ ಆದು ಆ ಜಾಗದಲ್ಲಿ ಮತ್ತೆ ಬೆಳೆಯದೆ ಇರಬಹುದು. ಈ ಗಾಯದ ಸ್ನಾಯುಗಳು ಜರ್ಜರಿತ ವಾಗಿ ಗಡ್ಡೆ ಕಾಣಿಸಿಕೊಳ್ಳುತ್ತದೆ. ಕೆಲವರು ಸಂತಾನ ನಿಯಂತ್ರಣಕ್ಕಾಗಿ ಬಹಳ ದಿನಗಳವರೆಗೆ ‘ಕಾಪರ್ ಟಿ ಯನ್ನು ಅವಳಡಿಸಿಕೊಂಡಿದ್ದರೆ ನಾರು ಗಡ್ಡೆಗಳು ಬೆಳೆಯಲು ಅವಕಾಶವಾಗುತ್ತದೆ.

ಮಕ್ಕಳಾಗದಿದ್ದವರಲ್ಲಿ ಶೇಕಡ 80 ಭಾಗ – ತಗಲುವ ಸಂಭವ, ಅಧಿಕ ರಕ್ತ ಒತ್ತಡ, ಸ್ಕೂಲಕಾಯ ಮಧುಮೇಹವಿದ್ದರೆ, ಆಹಾರ ಶೈಲಿ, ಧೂಮಪಾನ, ಮಧ್ಯಪಾನ, ತಂಬಾಕು ಸೇವನೆ, ಕೆಲವು ರಸಾಯನಿಕ ಕಾರ್ಖಾನೆಗಳಲ್ಲಿ ಅಧಿಕ ಕಾಲ ಕೆಲಸ ಮಾಡಿದರೆ, ಬಹು ಮಕ್ಕಳನ್ನು ಹೆತ್ತವರಿಗೆ ಗರ್ಭಕಂಠ ಕ್ಯಾನ್ಸನ್ ನಾರು ಗಡ್ಡೆ ಅಂಡಾಶಗಡ್ಡೆಗಳಿದ್ದರೆ, ಋತುನಿಂತ ಮೇಲೆ ರಕ್ತಸ್ರಾವವಾಗುತ್ತಿದ್ದರೆ, ಬಾಲ್ಯವಿವಾಹ ಗಳಿಂದಲೂ ಸಹ ಕ್ಯಾನ್ಸರ್ ವ್ಯಾಧಿಗಳು, ಪುರುಷನು ಶಿಶ್ನದ ಮುಂದೊಗಲು ಸರಿಯಾಗಿ ಶುಚಿಮಾಡದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಸತ್ತ ವೀರ್ಯಾಣುಗಳಿಂದ ಸ್ತ್ರೀಗೆ ತಗುಲಬಹುದು.

ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪ್ರಥಮ, ಎರಡನೇ ಸ್ಥಾನ ಗರ್ಭಕಂಠ, ಅನಂತರ ಗರ್ಭಕೋಶ ಕ್ಯಾನ್ಸರ್, ಅಂಡಾಶಯ, ಡಿಂಬನಾಳ, ಯೋನಿಗಳನ್ನು ಕ್ರಮಿಸುತ್ತದೆ.

 ಕ್ಯಾನ್ಸರ್ ಲಕ್ಷಣಗಳು :

ಋತು ಸಮಯದಲ್ಲಿ ಅತಿಯಾದ ಋತುಸ್ರಾವ ಕಾಣಿಸಿಕೊಳ್ಳುವುದು. ಸೋಂಕಿನಿಂದ ವಿಪರೀತ ರಕ್ತ ಸ್ರಾವವಾಗುವುದು, ಹೊಟ್ಟೆ ನೋವು, ಜ್ವರ ಬರುತ್ತಿರುತ್ತದೆ.

ಅತಿ ಕೆಟ್ಟ ವಾಸನೆಯಿಂದ ಕೂಡಿದ ಕೆಂಪು ಮಿಶ್ರಿತ ಬಿಳಿ ಮುಟ್ಟು.

ನೀರಿನಂತೆ ಯೋನಿಯಿಂದ ಸ್ರವಿಸುವ ಕೆಟ್ಟ ವಾಸನೆಯುಳ್ಳ ಯೋನಿಪ್ರಾವ

ಗರ್ಭಕೋಶದೊಳಗೆ ಸೋಂಕು ತಗುಲಿ, ಸವಕಳಿಯಾದಾಗ ಆಗುವ ಕೀವಿನಂತಹ ದುರ್ವಾಸನೆ ಉಳ್ಳ ಯೋನಿಸ್ರಾವ ಕಾಣಿಸುತ್ತದೆ. ಅವರ ಒಳಗೆ ಬರುತ್ತಿದ್ದ ಹಾಗೆಯೇ ವಾಸನೆ ಮೊದಲು ಬರುತ್ತದೆ

ರಕ್ತ ಹೀನತೆ, ಹಸಿವಿಲ್ಲದಿರುವುದು, ಆಯಾಸ, ಬಳಲಿಕೆ, ಸಣ್ಣದಾಗಿ ಸುಡುವಂತೆ ಕಾಡು ಜ್ವರದಿಂದ ಅಸ್ವಸ್ಥತೆ, ದೇಹದಲ್ಲಿನ ತೂಕ ಇಳಿಯುವಿಕೆ ಕಾಣುತ್ತದೆ.

ತೀವ್ರತರನಾದ ಗರ್ಭಕೋಶದ ಕ್ಯಾನ್ಸರ್ ಆಗಿದ್ದರೆ ಮೂತ್ರಕೋಶ, ಗುದುದ್ಧಾರಕ್ಕೂ ಹರಡುತ್ತದೆ. ಆದ್ದರಿಂದ ಸ್ವಯಂ ಚಿಕಿತ್ಸೆ ಬೇಡ. ಶೀಘ್ರವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ.

ಒಮ್ಮೊಮ್ಮೆ ಯಾವ ಲಕ್ಷಣಗಳು ಕಾಣದಿದ್ದರೂ ಹೊಟ್ಟೆಯು ಗರ್ಭಿಣಿಯಂತೆ ಉಬ್ಬಿಕೊಂಡು ಬೆಳೆಯುತ್ತಾ ಹೋಗುತ್ತದೆ. ಇದು ಬೆಳೆದಂತೆ ಮೂತ್ರಕಟ್ಟುವುದು, ಮಲಬದ್ಧತೆಯಿಂದ ತೊಂದರೆ ಪಡುತ್ತಾಳೆ.