ಮನೆ ಜ್ಯೋತಿಷ್ಯ ಉತ್ತರಭಾದ್ರಪದ ನಕ್ಷತ್ರ ಮತ್ತು ಜಾತಕ

ಉತ್ತರಭಾದ್ರಪದ ನಕ್ಷತ್ರ ಮತ್ತು ಜಾತಕ

0

* ಉತ್ತರಾಭಾದ್ರಪದಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

       ಈ ನಕ್ಷತ್ರದಲ್ಲಿ ಜ್ವರ ಬಂದರೆ 5 ದಿನ ಕ್ರೂರ, ಅಹಿರ್ಬುಕ್ಷ್ಯ ದೇವತೆಗೆ ನಕ್ಷತೇಷ್ಟಿ ಮಂತ್ರಗಳಿಂದ ಶಾಂತಿ ಮಾಡಿದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ. ಇವರಲ್ಲಿ ಕಳೆದ ಆಭರಣ ವಿಳಂಬದಿಂದ ಪುನಃ ಪ್ರಾಪ್ತಿಯಾಗುತ್ತದೆ. ಕನೈಯು ಋತುಮತಿಯಾದರೆ ಪತಿವ್ರತೆ, ಪುತ್ರವತಿಯಾಗುತ್ತಾಳೆ. ಪ್ರಯಾಣ ಮಾಡುವುದು ಕ್ಷೇಮಕಾರಕ. ಕ್ಷೌರ ಮುಂತಾದ ಕ್ರೂರ ಶುಭಕಾರ್ಯಗಳಿಗೆ, ಶ್ರಮ ಸಾಧ್ಯವಾದ ಸಕಲ ಶುಭ ಕಾರ್ಯಗಳಿಗೆ, ಮುಖ್ಯವಾಗಿ ನೇಕಾರಿಕೆ, ಕೃಷಿಕಾರ್ಯ, ಪಶುಗಳಿಗೆ, ನಾಮಕರಣ, ಬಜೆ, ಬೆಣ್ಣೆ ಇಡುವುದಕ್ಕೆ; ಎತ್ತು ಕುರಿ, ಕೋಳಿ ಮುಂತಾದ ಸಾಕುಪ್ರಾಣಿಗಳನ್ನು ಸಾಕುವುದಕ್ಕೆ ಇದು ಉತ್ತಮ ನಕ್ಷತ್ರ.

Join Our Whatsapp Group

       ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದ ಜಾತಕನು ಒತ್ತರೋಗಿ, ಕೋಪಿಷ್ಟ 2ನೇ ಚರಣದಲ್ಲಿ ಗುಣಗ್ರಾಹಿ, ಪ್ರಜ್ಞಾವಂತ, 3ನೇ ಚರಣದಲ್ಲಿ ಧೈರ್ಯವಂತ, ಬುದ್ದಿವಂತ, ಭೋಗಶಾಲಿ ಮತ್ತು 4ನೇ ಚರಣದಲ್ಲಿ ಧಾರಾಳಿ, ಅಲ್ಪಕ್ರೋಧಿ, ಅಲ್ಪರೋಗಿ, ಆದಿಯಲ್ಲಿ ಶನಿಯ ದೆಶ 19 ವರ್ಷ ದಾಮಾಷಾ ಪ್ರಕಾರ ನಡೆಯುತ್ತದೆ. 6ನೇ ತಿಂಗಳು, 11,18, 46ನೇ ವರ್ಷಗಳು ಕ್ರೂರ ವೃಷಭ ಮಾಸ, ಭಾನುವಾರ, ಕೃಷ್ಣಪಕ್ಷ ಚತುರ್ದಶಿ ಉತ್ರಾಭಾದ್ರಾ ನಕ್ಷತ್ರ ಇವುಗಳಲ್ಲಿ ಅಪಮೃತ್ಯು ಇದೆಲ್ಲಾ ಕಳೆದುಳಿದರೆ ಪರಮಾಯುಷ್ಯ 90 ವರ್ಷಗಳು

* ಉತ್ತರಾಭಾದ್ರಪದಾ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

ಉತ್ತರಾಭಾದ್ರಪದಾ ನಕ್ಷತ್ರದ ಕನೈಗೆ.

ಆಶ್ವಿನಿ, ಭರಣಿ, ಕೃತ್ತಿಕಾ 1ನೇ ಚರಣ, ರೋಹಿಣಿ, ಆದ್ರ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಉತ್ತರಾ, ಹಸ್ತಾ, ಸ್ವಾತಿ, ವಿಶಾಖಾ 4ನೇ ಚರಣ, ಅನುರಾಧಾ, ಜೈಷ್ಯಾ ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರಪದಾ, ಉತ್ತರಾಭಾದರಪದಾ,

 ಉತ್ತರಭಾದ್ರಪದಾ ನಕ್ಷತ್ರದ ವರನಿಗೆ

ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಚರಣ, ಮೃಗಶಿರಾ, ಆದ್ರ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘಾ, ಉತ್ತರಾ, ಚಿತ್ತಾ3, 4ನೇ ಚರಣ, ಸ್ವಾತಿ, ವಿಶಾಖಾ, ಅನುರಾಧಾ, ಜೈಷ್ಯಾ ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠ 1,2ನೇ ಚರಣ,ಉತ್ತರಾಭಾದ್ರಪದಾ, ರೇವತಿ.

* ಉತ್ತರಾಭಾದ್ರಪದಾ ನಕ್ಷತ್ರದವರ ಜನನಕ್ಕೆ ಶಾಂತಿ :

 ಶಿವೋ ನಾಮಸಿಸ್ವಧಿತಿ ಸ್ಟೇಪಿತಾನ ಮಸ್ತೇ ಅಸ್ತುಮಾಮಾ ಹಿಗಂ ಸೀಃ ।

 ನಿವರ್ತ ಯಾಮ್ಯಾ ಯುಷೇನ್ನಾದಳ ಪುಜನನಾಯ ರಾಯಸ್ಪೋಫಾಯಸು ಪ್ರಜಾಸ್ಮಾಯಸುವೀರ್ಯಾಯ |

        ಈ ನಕ್ಷತ್ರದಲ್ಲಿ ಸಂತಾನದ ಜನನವಾದಾಗ, ತಾಯ್ತಂದೆಯರು ಈ ಮಂತ್ರವನ್ನು ಒಂದು ಮಾಲೆಯಷ್ಟು ಜಪ ಮಾಡಿ, ಯಥಾಸಾಮರ್ಥ್ಯ ಅಕ್ಕಿ-ಬೆಲ್ಲ, ಕಡಲೆಕಾಳನ್ನು ದಾನ ಮಾಡಬೇಕು. ಇದರಿಂದ ಈ ನಕ್ಷತ್ರದ ದೋಷ ಶಾಂತವಾಗುವುದು.

 ಯಂತ್ರ :

ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣ ಪತ್ರದ ಮೇಲೆ ಉತ್ತೀರ್ಣಗೊಳಿಸಿ ಗುಗ್ಗುಳದ ಧೂಪ ಹಾಕಿ, ಈ ಕೆಳಗೆ ನೀಡಿದ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪ ಮಾಡಬೇಕು.

 ರುದ್ರ ನಮಕ, ಚಮಕ |

ఓం                                         ಓಂ

 ನಮೋ ಭಗವತಿಯೇ ರುದ್ರಾಯ

 ಮೋ ಜ್ವರ ಭಯಂ ಭದಿ ಸಾದ್ರ

 ಭರ್ವ ಜ್ವರ ಭಯ ಛಿಂದಿರು

ಗಸರ್ವಗ್ರಹಭಯಂಛಿಂತೇ

 ವಧಿ ಸರ್ವಸ ಶತ್ರ್ಯೊನಿವಾವ

ತೇರಣಂ ಸರ್ವವ್ಯಾಧಿನಿಗ

ರುವಾರಣಂ ರದ್ರಲೋಕಂಭ

ದ್ರಾಸಗಚ್ಛ ತಿಹ್ರಾಂ ಹ್ರೀಂ ಓಂಮೋ

ಯದ್ರಾರು ತೇವಗಭಮೋನ

ಓಂ      ಓಂ

ನಂತರ ಪಾಯಸ ನೈವೇದ್ಯ, ಮದ್ದಾನ್ನ, ಮಾಷಾನ್ನ, ತಿಲಾನ್ನ, ಆಜ್ಯ,ವ್ರೀಹಿ, ಯವ ಸಹಿತ ಹೋಮ ಮಾಡಬೇಕು ಮತ್ತು ದಧ್ಯಾನ್ನದ ಬಲಿ ಅರ್ಪಿಸಬೇಕು. ನಂತರ ಈ ಯಂತ್ರವನ್ನು ಶರೀರದಲ್ಲಿ ಧಾರಣೆ ಮಾಡಬೇಕು. ಇದರಿಂದ ಉತ್ತರಾಭಾದ್ರಪದಾ ನಕ್ಷತ್ರ ಜನಿತ ಸರ್ವ ದೋಷಗಳು ಶಾಂತವಾಗಿ, ಜಾತಕನಿಗೆ ಸುಖ-ಸಮೃದ್ಧಿಪ್ರಾಪ್ತಿಯಾಗುತ್ತದೆ.