ಉತ್ತರ ಕನ್ನಡ ಜಿಲ್ಲೆಯು ತನ್ನ ವೈವಿಧ್ಯಮಯ ಭೌಗೋಳಿಕತೆ, ದಟ್ಟವಾದ ಅರಣ್ಯ, ಸುಂದರವಾದ ನದಿಗಳು, ನಯನ ಮನೋಹರವಾದ ಜಲಪಾತಗಳು, ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಜನಪ್ರಿಯವಾಗಿದೆ.
ದಕ್ಷಿಣ ಭಾರತದ ಮಂದಿ ಉತ್ತರ ಭಾರತದ ಪ್ರವಾಸ ಕೈಗೊಂಡಾಗ ನಿಸ್ಸಂದೇಹವಾಗಿ ರೋಮಾಂಚಕ ಅನುಭೂತಿಯನ್ನು ಹೊಂದುತ್ತಾರೆ.
ಬೈತ್ಕೋಲ್ ಬೀಚ್
ಉತ್ತರ ಕನ್ನಡ ಜಿಲ್ಲೆಯಲ್ಲಿ ನೀವು ಆಹ್ಲಾದಕರವಾದ ಬೀಚ್ನಲ್ಲಿ ಕಾಲ ಕಳೆಯಲು ಕಡಲತೀರದ ಅನ್ವೇಷಣೆಯಲ್ಲಿದ್ದರೆ, ಈ ಬೈತ್ಕೋಲ್ ಬೀಚ್ ಬೆಸ್ಟ್. ಇದು ಕಾರವಾರ ಪಟ್ಟಣದಲ್ಲಿರುವ ಪ್ರಶಾಂತವಾದ ಬೀಚ್ ಆಗಿದ್ದು, ೬ ಕಿ.ಮೀ ದೂರದಲ್ಲಿದೆ. ಕಾರವಾರದ ಜನರಿಗೆ ಈ ಬೀಚ್ ವಾರಾಂತ್ಯದ ವಿಹಾರ ತಾಣವಾಗಿದೆ. ಉದಯಿಸುತ್ತಿರುವ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಿಲು ಪ್ರವಾಸಿಗರು ಹಾತೊರೆಯುತ್ತಾರೆ.
ಸದಾಶಿವಗಡ ಬೆಟ್ಟದ ಕೋಟೆ
ಉತ್ತರ ಕನ್ನಡದ ಕಾರವಾರದಲ್ಲಿ ನೋಡಲೇಬೇಕಾದ ಐತಿಹಾಸಿಕ ಸ್ಥಳಗಳಲ್ಲಿ ಈ ಸದಾಶಿವಗಡ ಬೆಟ್ಟದ ಕೋಟೆಯು ಒಂದಾಗಿದೆ. ಇದೊಂದು ಪುರಾತನ ಮತ್ತು ಭವ್ಯವಾದ ಕೋಟೆಯಾಗಿದ್ದು, ಬೆಟ್ಟದ ಮೇಲೆ ಸುಮಾರು ೨೦೦ ಅಡಿ ಎತ್ತರದಲ್ಲಿ ನೆಲೆಸಿದೆ. ಬೆಟ್ಟದ ಕೋಟೆಗೆ ತಲುಪಿದ ನಂತರ ಕಾಳಿ ನದಿಯ ಸೇತುವೆ ಮತ್ತು ಸುಂದರವಾದ ಸೂರ್ಯಾಸ್ತದ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಅಂಕೋಲಾ
ಅಂಕೋಲಾ ಗುಪ್ತ ರತ್ನಗಳನ್ನು ಹೊಂದಿರುವ ಅದ್ಭುತವಾದ ತಾಣ. ಇದು ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಮತ್ತು ನಯನ ಮನೋಹರವಾದ ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿಯಾಗಿದೆ.
ಅಂಕೋಲಾದಲ್ಲಿ ವಿಭೂತಿ ಜಲಪಾತ, ಹನಿ ಮತ್ತು ನಾಡಿಭಾಗ್ ಬೀಚ್ಗಳಿಗೆ ನೀವು ಭೇಟಿ ನೀಡಬಹುದು. ಇದಲ್ಲದೆ, ಮಹಮ್ಮಯ್ಯ ಮತ್ತು ಆರ್ಯದುರ್ಗ ದೇವಾಲಯಗಳಿಗೂ ಹೋಗಬಹುದು.
ಬನವಾಸಿ
ನೀವು ಉತ್ತರ ಕನ್ನಡದ ಪ್ರವಾಸ ಕೈಗೊಂಡಾಗ ತಪ್ಪದೇ ಬನವಾಸಿಗೆ ಹೋಗಲೇಬೇಕು. ಇದು ಉತ್ತರ ಕನ್ನಡದ ಶಿರಸಿ ಬಳಿ ಇರುವ ಒಂದು ಅದ್ಭುತವಾದ ದೇವಾಲಯವಾಗಿದೆ. ಅತ್ಯುತ್ತಮ ವಾಸ್ತುಶಿಲ್ಪಶೈಲಿಯನ್ನು ಹೊಂದಿರುವ ಈ ದೇವಾಲಯವನ್ನು ವರದಾ ನದಿಯು ಸುತ್ತುವರೆದಿದೆ. ಇದಲ್ಲದೆ, ಬನವಾಸಿಯಲ್ಲಿ ಪ್ರಶಾಂತವಾಗಿ ಧುಮ್ಮಿಕ್ಕುವ ಜಲಪಾತಗಳು ಮತ್ತು ದೇವಾಲಯಗಳಿಗೆ ನೆಲೆಯಾಗಿದೆ.
ಕುಮಟಾ
ಉತ್ತರ ಕನ್ನಡದಲ್ಲಿರುವ ಅತ್ಯಂತ ಸುಂದರ ಪ್ರವಾಸಿ ಸ್ಥಳಗಳನ್ನು ಹೊಂದಿರುವ ಕುಮಟಾದ ಪ್ರವಾಸ ರೋಮಾಂಚಕಾರಿ ಅನುಭೂತಿಯನ್ನು ಉಂಟು ಮಾಡುತ್ತದೆ. ಇದು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಬಳಿ ಅರಬ್ಬಿ ಸಮುದ್ರ ಮೇಲೆ ನೆಲೆಸಿದೆ.
ಮುಖ್ಯವಾಗಿ ಕುಮಟಾ ಭವ್ಯವಾದ ದೇವಾಲಯ, ಸಾಹಸ ಚಟುವಟಿಕೆ ಮತ್ತು ಬೀಚ್ಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಗೋಕರ್ಣದಿಂದ ಕೇವಲ ೩೦ ಕಿ.ಮೀ ದೂರದಲ್ಲಿರುವ ಕುಮಟಾ ಪ್ರವಾಸಿಗರನ್ನು ಸ್ವಾಗತಿಸುತ್ತದೆ.
ಕವಳ ಗುಹೆ
ಈ ಕವಳ ಗುಹೆ ದಾಂಡೇಲಿ ಅಭಯಾರಣ್ಯದಲ್ಲಿ ನೆಲೆಸಿದೆ. ಇದೊಂದು ಉತ್ತರ ಕನ್ನಡದ ಜಿಲ್ಲೆಯ ಗುಪ್ತ ರತ್ನವಾಗಿದ್ದು, ಹೆಚ್ಚು ಅನ್ವೇಷಣೆ ಮಾಡಿಲ್ಲದ ಪ್ರವಾಸಿ ತಾಣವಾಗಿದೆ. ಇಲ್ಲಿನ ಗುಹೆಯಲ್ಲಿ ಶಿವಲಿಂಗದಂತೆ ಕಾಣುವ ದೈತ್ಯ ಸ್ಟಾಲಗ್ಮೈಟ್ ಅನ್ನು ನೀವು ಕಾಣಬಹುದು. ಶಿವರಾತ್ರಿಯ ಸಮಯದಲ್ಲಿ ಶೈವ ಭಕ್ತರನ್ನು ಈ ಗುಹೆಯು ಆಕರ್ಷಿಸುತ್ತದೆ.
ನೇತ್ರಾಣಿ ದ್ವೀಪ
ನೀವು ರೋಮಾಂಚಕಾರಿ ವಾಟರ್ ಸ್ಪೋರ್ಟ್ಸ್ ಕೈಗೊಳ್ಳಲು ಉತ್ತರ ಕನ್ನಡದ ನೇತ್ರಾಣಿ ದ್ವೀಪ ಪರ್ಫೆಕ್ಟ್ ಆಗಿದೆ. ಕರ್ನಾಟಕದಲ್ಲಿ ಕೆಲವೇ ಕೆಲವು ಸ್ಕೂಬಾ ಡೈವಿಂಗ್ ಸ್ಥಳಗಳಿವೆ. ಅವುಗಳಲ್ಲಿ ನೇತ್ರಾಣಿ ದ್ವೀಪ ಕೂಡ ಒಂದಾಗಿದೆ. ಇನ್ನು, ಈ ನೇತ್ರಾಣಿ ದ್ವೀಪವು ಮುರುಡೇಶ್ವರ ಕರಾವಳಿಯಾಗಿದೆ.