ಪಿಥೋರಗಢ್: ಉತ್ತರಾಖಂಡದ ಪಿಥೋರಗಢ್ ಬಳಿ ಇಂದು (ಅ.16) 4.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಿಥೋರಘರ್‌ನಿಂದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ. 5 ಕಿ.ಮೀ ಆಳದಲ್ಲಿ ಪಿಥೋರಗಢದಲ್ಲಿ ಭೂಕಂಪ ಸಂಭವಿಸಿದೆ. ಇನ್ನು ಭೂಕಂಪನ ರಾಷ್ಟ್ರೀಯ ಕೇಂದ್ರವು ಭೂಕಂಪ ತೀವ್ರತೆ ಬಗ್ಗೆ ತಿಳಿಸಿದೆ.
ನೆನ್ನೆ (ಅ.15) ಹರಿಯಾಣದಲ್ಲಿ ಮತ್ತು ದೆಹಲಿಯಲ್ಲೂ ಪ್ರಬಲವಾದ ಕಂಪನ ಉಂಟಾಗಿದೆ. ಸಂಜೆ 4.8ಕ್ಕೆ 3.1ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ ಸಿಎಸ್ ಹೇಳಿದೆ.
ಈ ಸಮಯದಲ್ಲಿ ಎತ್ತರ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು ಒಂದು ಬಾರಿ ಗಾಬರಿಗೊಂಡು ಕೆಳಕ್ಕೆ ಬಂದಿದ್ದಾರೆ.