ಮನೆ ಮನರಂಜನೆ ಡಾಲಿ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್

ಡಾಲಿ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್

0

ಇಂದು ಡಾಲಿ ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಟೀಸರ್ ನಲ್ಲಿ ಧನಂಜಯ್ ಗಬ್ರು ಸತ್ಯನಾಗಿ ಮಿಂಚಿದ್ದಾರೆ. ಉತ್ತರ ಕರ್ನಾಟಕದ ಉಡಾಳ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ರಿವೀಲ್ ಆಗಿರುವ ಟೀಸರ್ ನಲ್ಲಿ ಗಬ್ರು ಸತ್ಯನ ಲುಕ್ ನ ಪರಿಚಯದ ಜೊತೆಗೆ ವ್ಯಕ್ತಿತ್ವದ ಝಲಕ್ ಅನ್ನು ನಿರ್ದೇಶಕ ರೋಹಿತ್ ಪದಕಿ ತೋರಿಸಿದ್ದಾರೆ. ಟೀಸರ್ ನ ಆರಂಭದಲ್ಲಿಯೇ ಧನಂಜಯ್ ಅಲಿಯಾಸ್ ಗಬ್ರು ಸತ್ಯ ಪೊಲೀಸ್ ಸ್ಟೇಷನ್ ನಲ್ಲಿ ಹೂವಿನ ಬಣ್ಣದ ಚಡ್ಡಿಯಲ್ಲಿ ಕೂತಿರುತ್ತಾನೆ. ಪೊಲೀಸ್ ಅಧಿಕಾರಿಯೊಬ್ಬರು ಗಬ್ರುಗೆ ಕೆಟ್ಟದಾಗಿ ಬೈಯ್ಯುತ್ತಾ, ವ್ಯಂಗ್ಯ ಮಾಡುತ್ತಾ ಇನ್ನೊಮ್ಮೆ ಹೆಸರು ಕಿವಿಗೆ ಬಿದ್ದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ ಗಬ್ರು ಸತ್ಯ ಮಾತ್ರ ತೀರ ನಾಟಕೀಯವಾಗಿ ಅಮಾಯಕನಂತೆ ನಟಿಸುತ್ತಾ ಹೊರಬರುತ್ತಾನೆ.

ಟೀಸರ್ ನಲ್ಲಿ ಪಕ್ಕಾ ಉಡಾಳ ಬುದ್ಧಿಯ ಗ್ಯಾಂಗ್ ಸ್ಟಾರ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೇ ನಡೆಯುವ ಕಥೆ ಆಧರಿಸಿದ ಸಿನಿಮಾವಾದ್ದರಿಂದ ಅಲ್ಲಿನ ಭಾಷೆಯನ್ನೇ ಬಳಸಲಾಗಿದೆ. ಮಾಸ್ ಅವತಾರದಲ್ಲಿ ಡಾಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ಪ್ರೇಕ್ಷಕರು ಖುಷಿಯನ್ನು ವ್ಯಕ್ತಪಡಿಸಿದ್ದು ಉತ್ತರಕಾಂಡ ಸಿನಿಮಾ ಬಗ್ಗೆ ಹೆಚ್ಚಿನ ನೀರಿಕ್ಷೆ ಇದೆ ಎಂದು ಹೇಳಿದ್ದರೆ.

ಡಾಲಿ ಎಂದೂ ಕರೆಯಲ್ಪಡುವ ಕಾಳೇನಹಳ್ಳಿ ಅಡವಿಸ್ವಾಮಿ ಧನಂಜಯ (ಜನನ 23 ಆಗಸ್ಟ್ 1985) , ಒಬ್ಬ ಭಾರತೀಯ ನಟ, ಗೀತರಚನೆಕಾರ ಮತ್ತು ಚಲನಚಿತ್ರ ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ಅವರ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಅವರು 2013 ರಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಿದರು.ಇದಕ್ಕಾಗಿ ಅವರು 3 ನೇ SIIMA ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಲಭಿಸಿದೆ.

ಹಿಂದಿನ ಲೇಖನಮಂಡ್ಯ: ಜಮೀನಿನ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಮುಂದಿನ ಲೇಖನಚಂದ್ರಯಾನ-3 ಯಶಸ್ಸಿಗೆ ಕ್ಷಣಗಣನೆ: ದೇಶದಲ್ಲೆಡೆ ವಿಶೇಷ ಪೂಜೆ