ಮೈಸೂರು: ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ಸೋಮಣ್ಣರನ್ನ ಸ್ಪರ್ಧೆಗಿಳಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ವಿ. ಸೋಮಣ್ಣ ಸ್ಪರ್ಧೆಯಿಂದಾಗಿ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಸಿದ್ಧರಾಮಯ್ಯ ತಮ್ಮ ಮೊಮ್ಮಗನನ್ನ ಕರೆ ತಂದಿದ್ದಾರೆ. ಜಾತಿವಾದಿ ಕಾಂಗ್ರೆಸ್, ಜೆಡಿಎಸ್ ಮಟ್ಟಹಾಕಬೇಕು ಎಂದು ಕಿಡಿ ಕಾರಿದರು.
ವರುಣಾಗೆ ವಿ.ಸೋಮಣ್ಣ ಬರಲು ಅವರು ಯಾರು ಎಂದು ಪ್ರಶ್ನಿಸಿದ್ದ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಸಂಸದ ಪ್ರತಾಪ್ ಸಿಂಹ, ಸಿದ್ಧರಾಮಯ್ಯಗೂ ಬಾದಾಮಿಗೂ ಏನು ಸಂಬಂಧ..? ಸೋನಿಯಾ ಗಾಂಧಿಗೂ ಬಳ್ಳಾರಿಗೂ ಏನು ಸಂಬಂಧ..? ಮಾತೆತ್ತಿದ್ದರೆ 10 ಕೆಜಿ ಅಕ್ಕಿ ಕೊಡ್ತೇನೆ ಅಂತಾರೆ. ಸಿದ್ಧರಾಮನಹುಂಡಿ ಗದ್ದೆಯಿಂದ ತಂದು ಕೊಡ್ತಾರಾ…? ಎಂದು ವಾಗ್ದಾಳಿ ನಡೆಸಿದರು.
Saval TV on YouTube