ಪ್ರತಿಯೊಂದು ಮಗುವಿಗೂ ಸಹಜವಾಗಿಯೇ ರೋಗನಿರೋಧಕ ಶಕ್ತಿ ಇರುತ್ತದೆ. ಆದರೆ ಕೆಲವು ರೋಗಗಳಿಗೆ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗದೆ ಆಯಾರೋಗಗಳು ಬಂದಾಗ ಪ್ರಾಣಪಾಯವಾಗಬಹುದು.
ರೋಗನಿರೋಧಕ ಶಕ್ತಿಯನ್ನು ಇಮ್ಯೂನಿಟಿ ಎನ್ನುತ್ತಾರೆ. ಇಮ್ಯುನಿಟಿ ಬೆಳವಣಿಗೆಯಾಗುವ ಪ್ರಕ್ರಿಯೆಯನ್ನು “ಇಮ್ಯುನೈಜೇಷನ್” ಎನ್ನುತ್ತಾರೆ. ಇಮ್ಯುನೈಜೇಷನ್ ಮುಖಪಾತ್ರವಹಿಸುತ್ತದೆ. ನಿಗದಿತ ವಯಸ್ಸಿನಲ್ಲಿ, ನಿಗದಿತ ಪ್ರಮಾಣದಲ್ಲಿ ವ್ಯಾಕ್ಸಿನ್ ಹಾಕಬೇಕು. ಪ್ರಮಾಣ ಮತ್ತು ವಯಸ್ಸು ವ್ಯತ್ಯಾಸವಾದರೆ ಫಲಿತಾಂಶ ಶೂನ್ಯವಾಗುತ್ತದೆ.
*ಇಮ್ಯೂನಿಟಿ ಆಕ್ಟಿವ್ ಮತ್ತು ಪ್ಲಾಸ್ಸಿವ್ :
ವ್ಯಾಕ್ಸೀನ್ ಗಳು ಟಾಕ್ಸಾಯಿಡ್ ಗಳನ್ನು ಕೊಡುವುದರ ಮೂಲಕ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮವನ್ನು “ಆಕ್ಟಿವ್ ಇಮ್ಯುನೈಜೇಷನ್” ಎನ್ನುತ್ತಾರೆ. ಮಕ್ಕಳಿಗೆ ಸಾಮಾನ್ಯವಾಗಿ ಕೊಡುವ ವ್ಯಾಕ್ಸಿಂಗ್ ಗಳು ಹಾಗೂ ಹನಿಗಳು ಆಕ್ಟಿವ್ ಇಮ್ಯೂನೈಜೇಷನ್ ಗುಂಪಿಗೆ ಸೇರಿದವುಗಳು.
ಪ್ಲಾಸ್ಟಿಕ್ ಇಮನೈಜೇಷನ್ ಎಂಬ ಮತ್ತೊಂದು ಕ್ರಮವೂ ಇದೆ. ಕೆಲವರು ರೋಗಗಳು ಬಂದಾಗ ತಕ್ಷಣ ಆ ರೋಗಗಳನ್ನು ನಿಯಂತ್ರಿಸಲು ಇತರೆ ವ್ಯಕ್ತಿಗಳಿಂದ ಮತ್ತು ಪ್ರಾಣಿಗಳಿಂದ ಈಗಾಗಲೇ ಸಿದ್ಧವಾಗಿರುವ ಆಂಟಿಬಾಡಿಗಳನ್ನು ಸಂಗ್ರಹಿಸಿ ಕೊಡುತ್ತಾರೆ.
ಮಾಮೂಲಿ ಆಕ್ಟಿವ್ ಇಮ್ಯುನೈಜೇಷನ್ ನಲ್ಲಿ ವ್ಯಾಕ್ಸಿಂಗ್ ಗಳಿಂದ, ಟಾಕ್ಸೈಡ್ ಗಳಿಂದ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗಲು ವಾರಗಳು ಮತ್ತು ತಿಂಗಳಗಳು ಹಿಡಿಯುತ್ತದೆ. ಕೆಲವು ಗಂಭೀರವಾಗಿ ಬಂದಾಗ ವಾಕ್ಸೀನ್ ಗಳಿಂದ ಟಾಪ್ ಸೈಡ್ ಗಳಿಂದ ಸಾಧ್ಯವಾಗುವುದಿಲ್ಲ. ಆಗ ಇತರ ವ್ಯಕ್ತಿಗಳಲ್ಲಿ ಪ್ರಾಣಿಗಳಲ್ಲಿ ಈಗಾಗಲೇ ಬೆಳವಣಿಗೆ ಆಗಿರುವುಗಳನ್ನು ಕೊಟ್ಟರೇನು ಆರೋಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ತಕ್ಷಣ ಕೆಲಸ ಮಾಡುವ ಇಮ್ಯೂನಿಟಿಯನ್ನು ಪ್ಯಾಸಿವ್ ಇಮ್ಮನೈಜೇಷನ್ ಎನ್ನುತ್ತಾರೆ.
ವ್ಯಾಕ್ಸೀನ್ ಗಳು :-
ರೋಗನಿರೋಧಕ ಶಕ್ತಿ ಬೆಳವಣಿಗೆಯಾಗಲು ವ್ಯಾಕ್ಸಿನ್ ರೂಪದಲ್ಲಿ ಜೀವಂತವಾಗಿರುವ ರೋಗಾಣುಗಳನ್ನು ಶರೀರದೊಳಗೆಸೇರಿಸುತ್ತಾರೆ. ರೋಗಾಣುಗಳನ್ನು ಬಹು ಕಡಿಮೆಪ್ರಮಾಣದಲ್ಲಿ ಕೊಡುವುದರಿಂದ ಅವು ರೋಗಗಳನ್ನುಂಟು ಮಾಡದೆ ಶರೀರದೊಳಗೆ ಸೇರಿದ ಅವರು ನಿರೋಧಕ ಕಣಗಳನ್ನು (ಆಂಟೀಬಾಡೀಸ್) ತಯಾರಿಸುತ್ತವೆ. ಕೆಲವು ರೋಗಗಳು ಬಂದಾಗ ಕೂಡ ಇದೇ ರೀತಿಯಲ್ಲಿ ಶರೀರ ಸಹಜವಾಗಿಯೇ ಆಂಟಿ ಬಾಡಿಸಸ್ ಅನ್ನು ತಯಾರಿಸಿ ರೋಗ ಪ್ರತಿರೋಧವನ್ನು ಓಡುತ್ತದೆ…..
ಈ ವಿಧವಾಗಿ ವ್ಯಾಕ್ಸಿನ್ ಗಳನ್ನು ಜೀವಂತ ರೋಗಾಣಗಳಿಂದ ತಯಾರಿಸಿದ್ದರೆ ಮತ್ತೆ ಕೆಲವು ವ್ಯಾಕ್ಸಿನ್ ಗಳನ್ನು ದುರ್ಬಲಗೊಳಿಸಿದ ರೋಗಾಣಗಳಿಂದ ತಯಾರಿಸುತ್ತಾರೆ. ಇನ್ನು ಕೆಲವು ವ್ಯಾಕ್ಸಿನ್ ಗಳಲ್ಲಿ ಮೃತರೋಗಾಣುಗಳನ್ನು ಶರೀರಕ್ಕೆ ಸೇರಿಸುತ್ತಾರೆ. ಈ ವಿಧದಲ್ಲಿ ಜೀವಂತವಾದ ದುರ್ಬಳಗೊಳಿಸಿದ ಮತ್ತು ಮೃತ ರೋಗಾಣುಗಳನ್ನು ವ್ಯಾಕ್ಸಿನ್ ರೂಪದಲ್ಲಿ ಶರೀರಕ್ಕೆ ಸೇರಿಸಿದರೆ ನಿಧಾನವಾಗಿ ಆಯಾ ರೋಗಗಳಿಗೆ ರೋಗನಿರೋಧಕ ಶಕ್ತಿ ಸಂಚಯನಗೊಳ್ಳುತ್ತದೆ.
- ಟಾಕ್ಸಾಯಿಡ್ ಟಾಕ್ಸಿನ್ :- ಬ್ಯಾಕ್ಟೀರಿಯಲ್ ಟಾಕ್ಸಿನನ್ನು ರೂಪಾಂತರಗೊಳಿಸಿ ವ್ಯಾಕ್ಸಿಂಗ್ ಕೊಡುತ್ತಾರೆ. ಇದರಿಂದಾಗಿ ಆ ಬ್ಯಾಕ್ಟೀರಿಯಾ ಟ್ಯಾಕ್ಸಿನ್ ಗೆ ಶರೀರದಲ್ಲಿ ರೋಗನಿರೋಧಕ ಶಕ್ತಿ ಬೆಳವಣಿಗೆ ಆಗುತ್ತದೆ
- ಆಂಟಿಟಾಕ್ಸಿನ್ :- ಕೆಲವು ಪ್ರತ್ಯೇಕವಾದ ಆಂಟಿಜೆನ್ಸ್ ಗಳಿಗೆ ಪ್ರಾಣಿಗಳಲ್ಲಿ ಆಂಟಿ ಬಾಡೀಸ್ ನನ್ನು ಬೆಳೆಸಿ ಅದನ್ನು ವ್ಯಾಕ್ಸಿನ್ ಆಗಿ ಪರಿವರ್ತಿಸುತ್ತಾರೆ.
*ಇಮ್ಯೂನೋಗ್ಲೋಬ್ಯುಲಿನ್ಸ್ :- ಇಮ್ಯೂನೋ ಗ್ಲೋಬ್ಯುಲಿನ್ಸ್ ಎಂಬ ವ್ಯಾಕ್ಸಿಂನ್ ಗಳು ಇವೆ. ಆಂಟಿಟಾಕ್ಸಿನ್ ಗಳನ್ನು ಪ್ರಾಣಿಗಳಲ್ಲಿ ಬೇಯಿಸಿ ವ್ಯಾಕ್ಸಿನಾಗಿ ಪರಿವರ್ತಿಸಿದರೆ ಮನುಷ್ಯರಲ್ಲಿ ಬೆಳೆಯಿಸಿದ ಆಂಟಿಬಾಡೀಸ್ ಗಳನ್ನು ಕೂಡ ಸಂಗ್ರಹಿಸಿ, ವ್ಯಾಕ್ಸಿನ್ ರೂಪದಲ್ಲಿ ಕೊಡುವವುಗಳನ್ನು ಇಮ್ಯುನೋಗ್ಲೋಬ್ಯುಲಿನ್ಸ್ ಎನ್ನುತ್ತಾರೆ.
ಮಿಜಿಲ್ಸ್ ವ್ಯಾಕ್ಸಿನ್ಸ್, ಮಮ್ಸ್ ವ್ಯಾಕ್ಸನ್ಸ್ಮ ರೂಬೆಲ್ಲ ವ್ಯಾಕ್ಸೀನ್, ಓರಲ್ ವ್ಯಾಕ್ಸೀನ್, ಚಿಕನ್ ಫಾಕ್ಸ್ ವ್ಯಾಕ್ಸೀನ್ ಗಳನ್ನು ದುರ್ಬಲಗೊಳಿಸಿದ ವೈರಸ್ ರೋಗಾಣುಗಳಿಂದ ತಯಾರಿಸುತ್ತಾರೆ. ಬಿ.ಸಿ.ಜಿ. ಟೈಫಾಯಿಡ್ ವ್ಯಾಕ್ಸೀನ್ ಗಳನ್ನು ದುರ್ಬಲಗೊಳಿಸಿದ ʼಬ್ಯಾಕ್ಟೀರಿಯಾʼ ರೋಗಾಣುಗಳಿಂದ ತಯಾರಿಸುತ್ತಾರೆ.
ಪೋಲಿಯೋ ಚುಚ್ಚುಮದ್ದು ವ್ಯಾಕ್ಸಿನ್, ರೇಬಿಸ್ ವ್ಯಾಕ್ಸಿಂನ್, ಜಪಾನೀಸ್ ಎನ್ ಕೆಪಲೈಟಿಸ್ ವ್ಯಾಕ್ಸಿನ್, ಹೆಪಟೈಟಿಸ್ –ಎ ವ್ಯಾಕ್ಸೀನ್ ಗಳನ್ನು ಮೃತ ವೈರಸ್ ರೋಗಾಣುಗಳಿಂದ ತಯಾರಿಸುತ್ತಾರೆ.
ನಾಯಿಕೆಮ್ಮು, ಕಾಲರಾ, ಪ್ಲೇಗ್ ವ್ಯಾಕ್ಸೀನ್ ಗಳನ್ನು ಮೃತ ಬ್ಯಾಕ್ಟೀರಿಯಾ ರೋಗಾಣುಗಳಿಂದ ತಯಾರಿಸುತ್ತಾರೆ. - ಕೋಲ್ಡ್ ಚೈನ್ ಫರ್ ವ್ಯಾಕ್ಸಿನ್ :-
ಕೆಲವು ವ್ಯಾಕ್ಸಿನ್ ಗಳನ್ನು ತಯಾರಿಸಿದಾಗಿನಿಂದಲೂ ಮಗುವಿಗೆ ಕೊಡುವವರೆಗೂ ಮಂಜುಗಡ್ಡೆಯಲ್ಲಿರಿಸಬೇಕು. ಈ ಕ್ರಮವನ್ನು ಕೋಲ್ಡ್ ಚೈನ್ ಫರ್ ವ್ಯಾಕ್ಸಿನ್ ಎನ್ನುತ್ತಾರೆ.
1-2 ತಿಂಗಳಷ್ಟೆ ಸಂಗ್ರಹಿಸಬೇಕಾದರೆ 2-8 ಡಿಗ್ರಿ ಸೆಂಟಿಗ್ರೇಡ್ ಶೀತದಲ್ಲಿರಿಸಬೇಕು.
ವ್ಯಾಕ್ಸೀನ್ ಗಳನ್ನು ತಯಾರಿಸಿದಾಗಿನಿಂದ ಬಹಳ ಕಾಲಸಂಗ್ರಹಿಸಿದ ಬೇಕಾದರೆ 20 ಡಿಗ್ರಿ ಸೆಂಟಿಗ್ರೇಡ್ ನ ಅತಿ ಶೀತದಲ್ಲಿರಿಸಬೇಕು
ಈ ವಿಧದಲ್ಲಿ ಬಿ.ಸಿ.ಜಿ. ವ್ಯಾಕ್ಸಿನ್, ಓರಲ್ ಪೋಲಿಯೋ ವ್ಯಾಕ್ಸೀನ್, ಮಿಜಿಲ್ಸ್ ವ್ಯಾಕ್ಸೀನ್, ಎಮ್. ಎಮ್. ಆರ್ ವ್ಯಾಕ್ಸೀನ್ ಗಳನ್ನು ಶೀತದಲ್ಲಿ ಸಂಗ್ರಹಿಸಬೇಕು. ಈ ವ್ಯಾಕ್ಸೀನ್ ಗಳನ್ನು ನಿಗದಿತ ಶೈತ್ಯಾಂಶದಲ್ಲಿ ಸಂಗ್ರಹಿಸದಿದ್ದರೆ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗುವುದಿಲ್ಲ. ಕೆಲ ವೈದ್ಯರು ಮತ್ತು ಆರೋಗ್ಯ ಕರ್ತರು ನಿತ್ಯವೂ ಬಳಸುವ ಈ ವ್ಯಾಕ್ಸಿನ್ ಗಳನ್ನು ಕೋಣೆ ವಾತಾವರಣದಲ್ಲೇ ಇಡುತ್ತಾರೆ. ಇಂಥ ವ್ಯಾಕ್ಸಿನ್ ಗಳಿಂದ ಏನು ಪ್ರಯೋಜನವಿಲ್ಲ. ಹಾಗಾಗಿ ಕೋಲ್ಡ್ ಚೈನ್ ತಿಳವಳಿಕೆ ಬಹು ಮುಖ್ಯ.
ವಾಸ್ತವಂಶ ಹೇಗಿದ್ದರೂ ಕೆಲವು ವೈದ್ಯರು ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನ್ ಗಳನ್ನು ಫ್ರಿಜ್ಜಿನಲ್ಲಿಟ್ಟು ಗಡ್ಡೆ ಕಟ್ಟಿಸುತ್ತಾರೆ. ಹೀಗೆ ಮಾಡುವುದು ಪ್ರಯೋಜನವಿಲ್ಲ ಮುಖ್ಯವಾಗಿ ಡಿ.ಪಿ.ಟಿ, ಡಿ.ಸಿ ವ್ಯಾಕ್ಸಿನ್ ಗಳನ್ನು ಗಡ್ಡೆ ಕಟ್ಟಿಸಬಾರದು ಈ ವ್ಯಾಕ್ಸಿಂಗ್ ಗಳನ್ನು ಸಂಗ್ರಹಿಸಲು ಡೊಮೆಸ್ಟಿಕ್ ರೆಫ್ರಿಜರೇಟರ್ ಸೂಕ್ತವಾಗಿರುತ್ತದೆ.
ಮುಂದುವರೆಯುತ್ತದೆ……